alex Certify ಧಾರಾವಾಹಿ, ಸಿನಿಮಾ ಪ್ರಿಯರಿಗೆ ಸಿಕ್ಕಿಲ್ಲ ಖುಷಿ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧಾರಾವಾಹಿ, ಸಿನಿಮಾ ಪ್ರಿಯರಿಗೆ ಸಿಕ್ಕಿಲ್ಲ ಖುಷಿ ಸುದ್ದಿ

ಕೊರೊನಾ ವೈರಸ್ ಕಾರಣ ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಎಲ್ಲಾ ಕೆಲಸಗಳು ಸ್ಥಗಿತಗೊಂಡಿವೆ. ಚಲನಚಿತ್ರಗಳು ಮತ್ತು ಟಿವಿ ಧಾರಾವಾಹಿಗಳ ಶೂಟಿಂಗ್ ಬಂದ್ ಆಗಿದೆ. ಶೂಟಿಂಗ್ ನಿಂತಿರುವ ಕಾರಣ ಚಲನಚಿತ್ರ, ಧಾರಾವಾಹಿ ಉದ್ಯಮಕ್ಕೆ  ಭಾರಿ ನಷ್ಟವಾಗಿದೆ. ಆರ್ಥಿಕ ಬಿಕ್ಕಟ್ಟು ಅನೇಕ ಕಲಾವಿದರ ಮುಂದಿದೆ. ಇಂತಹ ಪರಿಸ್ಥಿತಿಯಲ್ಲಿ ವೆಸ್ಟರ್ನ್ ಸಿನಿ ಇಂಡಿಯಾ ನೌಕರರ ಒಕ್ಕೂಟವು ಶೂಟಿಂಗ್ ಪ್ರಾರಂಭಿಸುವಂತೆ ಮನವಿ ಮಾಡಿದೆ. ಆದ್ರೆ ಈ ಮನವಿಗೆ ಇನ್ನು ಯಾವುದೇ ಉತ್ತರ ಸಿಕ್ಕಿಲ್ಲ.

ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ಜೂನ್ ನಲ್ಲಿ ಶೂಟಿಂಗ್ ಶುರುವಾಗಲಿದೆ ಎಂಬ ಸುದ್ದಿ ಬರ್ತಿದೆ. ಆದ್ರೆ ಇದು ಸುಳ್ಳು ಎಂದು ನಿರ್ಮಾಪಕರ ಸಂಘ ಹೇಳಿದೆ. ಈಗಾಗಲೇ ಈ ಬಗ್ಗೆ ಮಾರ್ಗಸೂಚಿ ಹೊರಡಿಸಲಾಗಿದೆ ಎಂಬ ಸುದ್ದಿಯಿದೆ. ಆದ್ರೆ ಇದ್ರಲ್ಲಿ ಸತ್ಯವಿಲ್ಲವೆಂದು ನಿರ್ಮಾಪಕರ ಸಂಘ ಹೇಳಿದೆ.

ಕೆಲ ಮಾರ್ಗಸೂಚಿಗಳನ್ನೂ ಇದ್ರಲ್ಲಿ ಹೇಳಲಾಗಿದೆ. ಶೂಟಿಂಗ್ ವೇಳೆ ಇನ್ಸ್ಫೆಕ್ಟರ್, ಪೊಲೀಸ್ ಕಡ್ಡಾಯ. ಕೇವಲ ಶೇಕಡಾ 50ರಷ್ಟು ಕಾರ್ಮಿಕರಿಗೆ ಮಾತ್ರ ಕೆಲಸ ಮಾಡಲು ಅವಕಾಶ ಸಿಗಲಿದೆ. ಶೂಟಿಂಗ್ ನಡೆಯುವ ವೇಳೆ ಕೊರೊನಾ ಕಾಣಿಸಿಕೊಂಡಲ್ಲಿ ಪರಿಹಾರ ನೀಡಬೇಕೆಂದು ಮಾರ್ಗಸೂಚಿ ವರದಿ ನೀಡಲಾಗಿದೆ. ಆದ್ರೆ ಇದು ಸುಳ್ಳೆಂದು ನಿರ್ಮಾಪಕರ ಸಂಘ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...