alex Certify ನಟಿ ಕರೀನಾ ಕಪೂರ್ ವಿರುದ್ದ ಕ್ರಿಶ್ಚಿಯನ್​ ಸಮುದಾಯದಿಂದ​ ದೂರು ದಾಖಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿ ಕರೀನಾ ಕಪೂರ್ ವಿರುದ್ದ ಕ್ರಿಶ್ಚಿಯನ್​ ಸಮುದಾಯದಿಂದ​ ದೂರು ದಾಖಲು

ತಮ್ಮ ಗರ್ಭಾವಸ್ಥೆಯ ಜೀವನದ ಅನುಭವನ್ನ ಹಂಚಿಕೊಳ್ಳಲು ಕರೀನಾ ಕಪೂರ್​ ಬರೆದಿರುವ ಪುಸ್ತಕ ಇದೀಗ ವಿವಾದಕ್ಕೆ ನಾಂದಿ ಹಾಡಿದೆ. ಕರೀನಾ ಕಪೂರ್​ ತಮ್ಮ ಪುಸ್ತಕಕ್ಕೆ ಬೈಬಲ್​ ಎಂದು ಹೆಸರಿಟ್ಟ ಕಾರಣ ಕ್ರಿಶ್ಚಿಯನ್​​ ಸಮುದಾಯದವರು ಮಹಾರಾಷ್ಟ್ರದಲ್ಲಿ ದೂರನ್ನ ದಾಖಲಿಸಿದ್ದಾರೆ.

ಆಲ್ಫಾ ಒಮೆಗಾ ಕ್ರಿಶ್ಚಿಯನ್​​ ಮಹಾಸಂಘ ಅಧ್ಯಕ್ಷ ಆಶಿಷ್​ ಶಿಂಧೆ ಎಂಬವರು ಶಿವಾಜಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನಲ್ಲಿ ಪ್ರೆಗ್ಸೆನ್ಸಿ ಬೈಬಲ್​ ಲೇಖಕರಾದ ಕರೀನಾ ಕಪೂರ್​ ಹಾಗೂ ಅದಿತಿ ಶಾ ಭಿಂಜಾನಿ ಹೆಸರನ್ನ ಉಲ್ಲೇಖಿಸಲಾಗಿದೆ.

ಬೈಬಲ್​ ಕ್ರಿಶ್ಚಿಯನ್​ ಧರ್ಮದ ಪವಿತ್ರ ಗ್ರಂಥವಾಗಿದ್ದು ಇದನ್ನ ಕರಿನಾ ಕಪೂರ್​ ತಮ್ಮ ಪುಸ್ತಕದ ಹೆಸರಾಗಿ ಬಳಕೆ ಮಾಡಿರೋದು ಕ್ರಿಶ್ಚಿಯನ್​ ಸಮುದಾಯದ ಅಸಮಾಧಾನಕ್ಕೆ ಕಾರಣವಾಗಿದೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಶಿವಾಜಿನಗರ ಠಾಣಾ ಇನ್​ಚಾರ್ಜ್​ ಇನ್​ಸ್ಪೆಕ್ಟರ್​​ ಸೈನಾಥ್​ ಥೋಂಬ್ರೆ, ಈ ಸಂಬಂಧ ನಾವು ದೂರನ್ನ ಸ್ವೀಕರಿಸಿದ್ದೇವೆ. ಆದರೆ ಇಲ್ಲಿಯವರೆಗೆ ಎಫ್​ಐಆರ್​ ದಾಖಲು ಮಾಡಿಲ್ಲ ಎಂದು ಹೇಳಿದ್ರು.

ಬಾಲಿವುಡ್​ ನಟಿ ಕರೀನಾ ಕಪೂರ್​ ಜುಲೈ 9ರಂದು ತಾವು ಪುಸ್ತಕ ಬಿಡುಗಡೆ ಮಾಡುತ್ತಿರುವ ವಿಚಾರವನ್ನ ಬಹಿರಂಗಪಡಿಸಿದ್ದರು, 40 ವರ್ಷದ ಈ ನಟಿ ಕೆಲ ತಿಂಗಳ ಹಿಂದಷ್ಟೇ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...