alex Certify ಈ ಒಂದು ಫೋಟೋಗಾಗಿ ಬರೋಬ್ಬರಿ 15 ವರ್ಷ ಹುಡುಕಾಟ ನಡೆಸಿದ್ದರು ದಿವಂಗತ ನಟ ವಿವೇಕ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಒಂದು ಫೋಟೋಗಾಗಿ ಬರೋಬ್ಬರಿ 15 ವರ್ಷ ಹುಡುಕಾಟ ನಡೆಸಿದ್ದರು ದಿವಂಗತ ನಟ ವಿವೇಕ್​..!

ತಮಿಳು ಚಿತ್ರರಂಗದ ಹಾಸ್ಯ ನಟ ವಿವೇಕ್​ ಮೊನ್ನೆಯಷ್ಟೇ ಹೃದಯಾಘಾತದಿಂದ ನಿಧನರಾಗಿದ್ದರು. ಈ ನಟ ದಶಕಗಳಿಂದ ಒಂದು ಹಳೆಯ ಫೋಟೋಗಾಗಿ ಹುಡುಕಾಟ ನಡೆಸುತ್ತಿದ್ದರಂತೆ. ಈ ಫೋಟೋ ಇದೀಗ ಲಭ್ಯವಾಗಿದೆ. ಈ ಫೋಟೋವನ್ನ ಮಧುರೈನ ತಲ್ಲಕುಲಂನಲ್ಲಿ 1983ರಲ್ಲಿ ಟೆಲಿಫೋನ್ ಆಪರೇಟರ್​ ತರಬೇತಿ ಮುಗಿಸಿದ ಬಳಿಕ ಕ್ಲಿಕ್ಕಿಸಿದ ಫೋಟೋವಾಗಿತ್ತಂತೆ.

38 ವರ್ಷಗಳ ಹಿಂದಿನ ಈ ಫೋಟೋವನ್ನ ವಿವೇಕ್​ರ ಸಹಪಾಠಿಯೊಬ್ಬರು ಬೆಳಕಿಗೆ ತಂದಿದ್ದಾರೆ. ಶನಿವಾರ ವಿವೇಕ್​ರ ಸಾವಿನ ವಾರ್ತೆ ವೈರಲ್​ ಆಗುತ್ತಿದ್ದಂತೆ ಬಿಎಸ್​ಎನ್​ಎಲ್​ ಇಲಾಖೆ ಸಿಬ್ಬಂದಿ ಈ ಫೋಟೋವನ್ನ ವ್ಯಾಪಕವಾಗಿ ಹಂಚಿಕೊಳ್ತಿದ್ದಾರೆ.

ಚೆನ್ನೈನ ಬಿಎಸ್​ಎನ್​ಎಲ್​​ ಇಲಾಖೆಯಲ್ಲಿ ಕೆಲಸ ಮಾಡ್ತಿದ್ದ ಸ್ನೇಹಿತರಿಂದ ಈ ಫೋಟೋಗಳನ್ನ ಪಡೆದ 60 ವರ್ಷದ ಹಿರಿಯ ಪತ್ರಕರ್ತ ಜೇನ್​ರಾಮ್​ ಈ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಶೇಷ ಅಂದರೆ ಕಳೆದ 15 ವರ್ಷಗಳಿಂದ ಈ ಫೋಟೋಗಾಗಿ ವಿವೇಕ್​ ಹುಡುಕಾಟ ನಡೆಸಿದ್ದರಂತೆ.

ವಿವೇಕನಂದನ್​ ಹಾಗೂ ನಾನು ಸೇರಿದಂತೆ ಒಟ್ಟು 29 ಮಂದಿ ಪೋಸ್ಟಲ್​ ಹಾಗೂ ಟೆಲಿಕಮ್ಯೂನಿಕೇಷನ್​​ನಲ್ಲಿ ಟೆಲಿಫೋನ್ ಆಪರೇಟರ್​​ ಆಗಿ ತರಬೇತಿಗೆ ಸೇರಿದ್ದೇವೆ ಎಂದಿದ್ದಾರೆ ಫೋಟೋ ಕೊಟ್ಟ ವ್ಯಕ್ತಿ. ಮಧುರೈನಲ್ಲಿ 1882 ಡಿಸೆಂಬರ್​ 27ರಿಂದ 1983 ಮಾರ್ಚ್ 26ರವರೆಗೆ ಇಲ್ಲಿ ವಿವೇಕ್​ ತರಬೇತಿ ಪಡೆದಿದ್ದರಂತೆ.

ಅಮೆರಿಕನ್​ ಕಾಲೇಜಿನಲ್ಲಿ ಪದವಿ ಪೂರ್ಣಗೊಳಿಸಿದ್ದ ವಿವೇಕ್​ ಕುಟುಂಬಸ್ಥರ ಜೊತೆ ಮಧುರೈನಲ್ಲಿ ತಮ್ಮ ಮನೆಯಲ್ಲಿ ವಾಸಿಸುತ್ತಿದ್ದರು. ಈ ವೇಳೆ ಜೇನ್​ರಾಮ್ ಅವರ ನೆರೆಮನೆಯವರಾಗಿದ್ದರು. ಭಾನುವಾರ ವಿವೇಕ್​ ನಮ್ಮ ಬಾಡಿಗೆ ಮನೆಗೆ ಭೇಟಿ ನೀಡುತ್ತಿದ್ದರು. ಅಪರೂಪಕ್ಕೆ ಅವರು ಹಾರ್ಮೋನಿಯಂ ಬಾರಿಸುತ್ತಿದ್ದರು ಹಾಗೂ ಅವರು ಶಾಸ್ತ್ರೀಯ ಸಂಗೀತ ಹಾಗೂ ಪಾಪ್​ ಸಂಗೀತಗಳನ್ನ ಹಾಡುತ್ತಿದ್ದರು ಎಂದು ಹಳೆಯ ನೆನಪುಗಳನ್ನ ಜೇನ್​ರಾಮ್​ ಮೆಲುಕು ಹಾಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...