alex Certify ಈ ಕೆಲಸ ಮಾಡಿದ್ರೆ ಸಿಗುತ್ತೆ ನಟಿ ಜೊತೆ ಕಾಫಿ ಕುಡಿಯುವ ಅವಕಾಶ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕೆಲಸ ಮಾಡಿದ್ರೆ ಸಿಗುತ್ತೆ ನಟಿ ಜೊತೆ ಕಾಫಿ ಕುಡಿಯುವ ಅವಕಾಶ…!

ಕಳೆದ ಒಂದೂವರೆ ತಿಂಗಳಿಂದ ಸಾಕಷ್ಟು ಮಂದಿ ಉದ್ಯೋಗವಿಲ್ಲದೆ ಮನೆಯಲ್ಲಿ ಕೂರುವಂತಾಗಿದೆ. ಹೀಗಾಗಿ ಬಡವರಿಗೆ, ನಿರ್ಗತಿಕರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ ಸರ್ಕಾರ ಸೇರಿದಂತೆ ಇತರೆ ಸಂಘ – ಸಂಸ್ಥೆಗಳು ದಿನಸಿ, ಊಟ ನೀಡುತ್ತಿವೆ.

ಇನ್ನು ಒಂದಿಷ್ಟು ಕಡೆಗಳಲ್ಲಿ ಸರಿಯಾಗಿ ಊಟದ ವ್ಯವಸ್ಥೆ ಆಗುತ್ತಿಲ್ಲ ಅಂತಲೂ ಹೇಳಲಾಗುತ್ತಿದೆ. ಇದ್ದಂತವರು ಇಲ್ಲದವರಿಗೆ ಸಹಾಯ ಮಾಡಿ ಎಂದು ಹೇಳಲಾಗಿದ್ದರೂ ಈ ಸಹಾಯ ತುಂಬಾ ಕಡೆ ಆಗುತ್ತಿಲ್ಲ. ಹೀಗಾಗಿ ನಟಿಯೊಬ್ಬರು ಸಹಾಯ ಮಾಡುವವರಿಗೊಂದು ಆಫರ್ ನೀಡಿದ್ದಾರೆ.

ಹೌದು, ರಾಜಕಾರಣಿಗಳು, ಸಿನಿಮಾ ಸ್ಟಾರ್ಸ್ ಗಳು, ಸಂಘ – ಸಂಸ್ಥೆಗಳು ನಿರ್ಗತಿಕರಿಗೆ ಸಹಾಯ ಮಾಡುತ್ತಿದ್ದಾರೆ. ಇದೀಗ ಪರಿಣಿತಿ ಚೋಪ್ರಾ ಸಹಾಯ ಮಾಡುವ ಸಾರ್ವಜನಿಕರಿಗೆ ಆಫರ್ ಒಂದನ್ನು ನೀಡಿದ್ದಾರೆ. ಈ ಬಗ್ಗೆ ನಟಿ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ. ದಿನಗೂಲಿ ನೌಕರರಿಗೆ ಸಹಾಯ ಮಾಡಿ ನನ್ನೊಂದಿಗೆ ಕಾಫಿ ಡೇಟ್ ನಲ್ಲಿ ಭಾಗವಹಿಸಿ ಎಂದು ಹೇಳಿದ್ದಾರೆ.

ಪರಿಣಿತಿ ಅವರ ಜೊತೆ ಕಾಫಿ ಕುಡಿಯಲು ಬಯಸುವವರು ಸಹಾಯ ಮಾಡಬೇಕು. ಪರಿಣಿತಿ ಮತ್ತು ಸಹಾಯ ಮಾಡಿದ ವ್ಯಕ್ತಿ ಲೈವ್​​ನಲ್ಲಿ ಕುಳಿತುಕೊಂಡು ಕಾಫಿ ಸವಿಯುತ್ತಾ ಕೆಲ ಕಾಲ ಮಾತನಾಡಬಹುದು. ಇಂತಹದೊಂದು ಅವಕಾಶ ನಿಮ್ಮದಾಗಬೇಕು ಎಂದರೆ ನೀವು ಬೇರೆಯವರಿಗೆ ಸಹಾಯ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...