alex Certify BIG NEWS: ‘ಆಭರಣ ಕಳೆದುಕೊಂಡ ಭಾರತ’; ಲೆಜೆಂಡರಿ ಕಥಕ್ ಡ್ಯಾನ್ಸರ್ ಪಂಡಿತ್ ಬಿರ್ಜು ಮಹಾರಾಜ್ ನಿಧನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ‘ಆಭರಣ ಕಳೆದುಕೊಂಡ ಭಾರತ’; ಲೆಜೆಂಡರಿ ಕಥಕ್ ಡ್ಯಾನ್ಸರ್ ಪಂಡಿತ್ ಬಿರ್ಜು ಮಹಾರಾಜ್ ನಿಧನ

ನವದೆಹಲಿ: ಕಥಕ್ ದಂತಕಥೆ ಪಂಡಿತ್ ಬಿರ್ಜು ಮಹಾರಾಜ್ ಅವರು ಹೃದಯಾಘಾತದಿಂದ ಭಾನುವಾರ ತಡರಾತ್ರಿ ದೆಹಲಿಯ ತಮ್ಮ ಮನೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.

ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣ ಪಡೆದಿದ್ದ ಅವರನ್ನು, ಶಿಷ್ಯರು ಮತ್ತು ಅಭಿಮಾನಿಗಳು ಪ್ರೀತಿಯಿಂದ ಪಂಡಿತ್-ಜಿ, ಮಹಾರಾಜ್-ಜಿ ಎಂದು ಕರೆಯುತ್ತಿದ್ದರು. ಅವರು ಭಾರತದ ಅತ್ಯುತ್ತಮ ಕಲಾವಿದರಲ್ಲಿ ಒಬ್ಬರಾಗಿದ್ದರು.

ಭಾನುವಾರ ತಡರಾತ್ರಿ ಬಿರ್ಜು ಮಹಾರಾಜ್ ತನ್ನ ಮೊಮ್ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ಅವರ ಆರೋಗ್ಯ ಹದಗೆಟ್ಟಿದ್ದು, ಪ್ರಜ್ಞಾಹೀನರಾಗಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಪರೀಕ್ಷಿಸಿದ ವೈದ್ಯರು ಘೋಷಿಸಿದ್ದಾರೆ.

ಕೆಲ ದಿನಗಳ ಹಿಂದೆ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ಡಯಾಲಿಸಿಸ್ ಮಾಡಲಾಗಿತ್ತು.

ಬಿರ್ಜು ಮಹಾರಾಜ್ ಕಥಕ್ ನೃತ್ಯಗಾರರಾದ ಮಹಾರಾಜ್ ಕುಟುಂಬದ ವಂಶಸ್ಥರಾಗಿದ್ದರು, ಇದರಲ್ಲಿ ಅವರ ಇಬ್ಬರು ಚಿಕ್ಕಪ್ಪಂದಿರಾದ ಶಂಭು ಮಹಾರಾಜ್, ಲಚ್ಚು ಮಹಾರಾಜ್ ಮತ್ತು ಅವರ ತಂದೆ, ಗುರು ಅಚ್ಚನ್ ಮಹಾರಾಜ್ ಸೇರಿದ್ದಾರೆ.

ಕಥಕ್ ಡ್ಯಾನ್ಸರ್ ಮಾತ್ರವಲ್ಲದೇ ಅತ್ಯುತ್ತಮ ಡ್ರಮ್ಮರ್ ಆಗಿದ್ದ ಬಿರ್ಜು ಮಹಾರಾಜ್, ಬಹುತೇಕ ಎಲ್ಲಾ ಡ್ರಮ್‌ಗಳನ್ನು ಸುಲಭವಾಗಿ ಮತ್ತು ನಿಖರವಾಗಿ ನುಡಿಸುತ್ತಿದ್ದರು; ವಿಶೇಷವಾಗಿ ತಬಲಾ ಮತ್ತು ನಾಲ್ ನುಡಿಸುವುದನ್ನು ಇಷ್ಟಪಡುತ್ತಿದ್ದರು. ದಾದ್ರಾ, ಭಜನ್ ಮತ್ತು ಗಜಲ್‌ಗಳ ಮೇಲೆ ಹಿಡಿತವನ್ನು ಹೊಂದಿದ್ದ ಅತ್ಯುತ್ತಮ ಗಾಯಕರಾಗಿದ್ದರು.

ಲೆಜೆಂಡರಿ ಕಥಕ್ ಡ್ಯಾನ್ಸರ್ ಪಂಡಿತ್ ಬಿರ್ಜು ಮಹಾರಾಜ್ ಜೀ ಅವರ ನಿಧನದ ಸುದ್ದಿಯಿಂದ ತೀವ್ರ ದುಃಖವಾಗಿದೆ. ರಂಗ ಕಲೆಯ ಕ್ಷೇತ್ರದಲ್ಲಿ ಅಪ್ರತಿಮ ಸಂಸ್ಥೆ ಕಳೆದುಕೊಂಡಿದ್ದೇವೆ. ಅವರು ತಮ್ಮ ಪ್ರತಿಭೆಯ ಮೂಲಕ ಹಲವಾರು ತಲೆಮಾರುಗಳ ಮೇಲೆ ಪ್ರಭಾವ ಬೀರಿದ್ದಾರೆ. ಅವರಿಗೆ ಶಾಂತಿ ಸಿಗಲಿ ಎಂದು ಗಾಯಕ ಅದ್ನಾನ್ ಸಾಮಿ ಟ್ವೀಟ್ ಮಾಡಿದ್ದಾರೆ.

ಭಾರತ ಒಂದು ಆಭರಣ ಕಳೆದುಕೊಂಡಿದೆ ಎಂದು ಚಲನಚಿತ್ರ ನಿರ್ಮಾಪಕ ಅಶೋಕ್ ಪಂಡಿತ್ ಟ್ವೀಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...