alex Certify ಪಾಕ್‌ ನಲ್ಲಿರುವ‌ ರಾಜ್ ಕಪೂರ್‌ ಪೂರ್ವಜರ ಮನೆ ಮಾರಲು ಬರೋಬ್ಬರಿ 200 ಕೋಟಿ ರೂ. ಡಿಮ್ಯಾಂಡ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಕ್‌ ನಲ್ಲಿರುವ‌ ರಾಜ್ ಕಪೂರ್‌ ಪೂರ್ವಜರ ಮನೆ ಮಾರಲು ಬರೋಬ್ಬರಿ 200 ಕೋಟಿ ರೂ. ಡಿಮ್ಯಾಂಡ್….!

Image result for Owner of Raj Kapoor's Ancestral Home in Pakistan Demands Rs 200 Crore for Selling it: All You Need to Know

ಭಾರತೀಯ ಚಿತ್ರರಂಗದ ದಂತಕಥೆಗಳಾದ ದಿಲೀಪ್ ಕುಮಾರ್‌ ಹಾಗೂ ರಾಜ್‌ ಕಪೂರ್‌ರ ಪೂರ್ವಜರ ಮನೆಗಳನ್ನು ಸಂಗ್ರಹಾಲಯಗಳನ್ನಾಗಿ ಮಾಡಬೇಕೆಂಬ ಅವರ ಅಭಿಮಾನಿಗಳ ಕನಸು ನನಸಾಗುವಂತೆ ಕಾಣುತ್ತಿಲ್ಲ.

ಈ ಇಬ್ಬರೂ ದೊಡ್ಡ ನಟರ ಮನೆಗಳನ್ನು ಖರೀದಿ ಮಾಡಲು ಪಾಕಿಸ್ತಾನ ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದ ಸರ್ಕಾರ ನಿರ್ಧರಿಸಿದ್ದು, ಎರಡೂ ಮನೆಗಳನ್ನು ಮ್ಯೂಸಿಯಂಗಳನ್ನಾಗಿ ಪರಿವರ್ತಿಸಿ, ಬಾಲಿವುಡ್‌ ಸ್ಟಾರ್‌ಗಳಿಗೆ ಗೌರವಿಸುವ ಆಸೆಯನ್ನು ಇಟ್ಟುಕೊಂಡಿದೆ. ಆದರೆ ಆ ಮನೆಗಳಲ್ಲಿ ಈಗ ವಾಸವಿರುವ ಮಾಲೀಕರು ತಮ್ಮ ವಾಸವನ್ನು ಬಿಟ್ಟುಕೊಡಲು 200 ಕೋಟಿ ರೂ.ಗಳಷ್ಟು ಬೇಡಿಕೆ ಇಡುತ್ತಿರುವ ಕಾರಣ ಈ ಕೆಲಸ ಸದ್ಯಕ್ಕೆ ಆಗುವುದು ಅನುಮಾನವಾಗಿದೆ.

ದಿಲೀಪ್ ಕುಮಾರರ ಪೂರ್ವಜನರ ಮನೆಯ ಸದ್ಯದ ಮಾಲೀಕರು 25 ಕೋಟಿ ರೂ.ಗಳ ಡಿಮ್ಯಾಂಡ್ ಮಾಡಿದ್ದಾರೆ. ರಾಜ್ ಕಪೂರ್‌ ಮನೆ ಬಿಟ್ಟುಕೊಡಲು ಹಾಲಿ ವಾರಸುದಾರರು 200 ಕೋಟಿ ರೂ.ಗಳ ಬೇಡಿಕೆ ಇಟ್ಟಿದ್ದಾರೆ.

ಪೇಶಾವರ್ ನಗರದ ಹೃದಯ ಭಾಗದಲ್ಲಿರುವ ಈ ಮನೆಗಳ ಖರೀದಿಗೆ ಅಲ್ಲಿನ ಸರ್ಕಾರವು 2.3 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಆದರೆ ಮಾಲೀಕರ ಬೇಡಿಕೆ ಮುಂದೆ ಇದು ಏನೇನೂ ಅಲ್ಲ ಎಂಬಂತಾಗಿದೆ.

ವರನಟ ಡಾ.ರಾಜ್‌ ಬಿಡುಗಡೆಗೆ 15 ಕೋಟಿ ರೂ. ಪಡೆದಿದ್ದನಾ ಕಾಡುಗಳ್ಳ ವೀರಪ್ಪನ್…?‌ ಶಿವಸುಬ್ರಮಣ್ಯಂ ಪುಸ್ತಕದಲ್ಲಿ ಸ್ಪೋಟಕ ಮಾಹಿತಿ ಬಹಿರಂಗ

ಇಲ್ಲಿನ ಕಿಸ್ಸಾ ಖವಾನಿ ಬಝಾರ್‌ನಲ್ಲಿರುವ ದಿಲೀಪ್ ಕುಮಾರರ ಮನೆ 100 ವರ್ಷಕ್ಕಿಂತ ಹಳೆಯದಾಗಿದ್ದು, 2014ರಲ್ಲಿ ನವಾಝ್ ಶರೀಫ್ ನೇತೃತ್ವದ ಪಾಕಿಸ್ತಾನ ಸರ್ಕಾರದಿಂದ ಪಾರಂಪರಿಕ ಕಟ್ಟಡವೆಂದು ಘೋಷಿಸಲ್ಪಟ್ಟಿದೆ.

2005ರಲ್ಲಿ ಹಾಜಿ ಲಾಲ್ ಮುಹಮ್ಮದ್ ಎಂಬಾತ ಈ ಮನೆಯನ್ನು 51 ಲಕ್ಷ ರೂ ತೆತ್ತು ಖರೀದಿ ಮಾಡಿದ್ದರು. ಸರ್ಕಾರ ಹೇಳುತ್ತಿರುವ ಬೆಲೆ ಬಹಳ ಸಣ್ಣದಾಗಿದೆ ಎಂದ ಮುಹಮ್ಮದ್‌ ಅದನ್ನು ಮಾರಾಟ ಮಾಡಲು ನಿರಾಕರಿಸಿದ್ದಾರೆ.

ಕಪೂರ್‌ ಹವೇಲಿ ಎನ್ನಲಾದ ರಾಜ್‌ ಕಪೂರರ ಪೂರ್ವಜರ ಮನೆಯು ಇದೇ ಪ್ರದೇಶದಲ್ಲಿದೆ. 1918-1922ರ ನಡುವೆ ಈ ಮನೆ ನಿರ್ಮಾಣ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...