alex Certify ಅಶ್ಲೀಲ ಶೋ ಬಿಗ್ ಬಾಸ್ ಬ್ಯಾನ್ ಗೆ ಆಗ್ರಹ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಶ್ಲೀಲ ಶೋ ಬಿಗ್ ಬಾಸ್ ಬ್ಯಾನ್ ಗೆ ಆಗ್ರಹ

सलमान खान

ಬಿಗ್ ಬಾಸ್ ಶೋ ವಿವಾದಗಳ ಶೋ ಎಂಬುದು ಎಲ್ಲರಿಗೂ ತಿಳಿಸಿದೆ. ಒಂದಲ್ಲ ಒಂದು ಕಾರಣಕ್ಕೆ ಬಿಗ್ ಬಾಸ್ ಶೋ ಸುದ್ದಿಯಲ್ಲಿರುತ್ತದೆ. ಈಗ ಈ ಋತುವಿನ ಬಿಗ್ ಬಾಸ್ ಶೋ ಶುರುವಾಗಿದೆ. ಆರಂಭದಲ್ಲಿಯೇ ಶೋ ವಿವಾದಗಳನ್ನು ಹುಟ್ಟುಹಾಕಿದೆ.

ಮುಂದಿನ ಶೋದ ಪ್ರೋಮೋ ಬಿಡುಗಡೆಯಾಗಿದೆ. ಇದ್ರಲ್ಲಿ ಹುಡುಗಿಯರು ಸಿದ್ಧಾರ್ಥ್ ಶುಕ್ಲಾರನ್ನು ಸೆಳೆಯಬೇಕು. ನಾಲ್ಕೈದು ಸ್ಪರ್ಧಿಗಳು ಸಿದ್ಧಾರ್ಥ್ ಜೊತೆ ರೈನ್ ಡಾನ್ಸ್ ಮಾಡ್ತಿದ್ದಾರೆ. ಈ ಪ್ರೋಮೋ ಜನರಲ್ಲಿ ಕೋಪ ತರಿಸಿದೆ. ಕೆಲವರು ಬಿಗ್ ಬಾಸ್ ಶೋ ನಿಷೇಧಿಸುವಂತೆ ಒತ್ತಾಯಿಸಿದ್ದಾರೆ.

#BoycottBB14 ಹೆಸರಿನಲ್ಲಿ ಬಿಗ್ ಬಾಸ್ ಶೋ ಬಂದ್ ಮಾಡುವಂತೆ ಆಗ್ರಹಿಸುತ್ತಿದ್ದಾರೆ. ಬಿಗ್ ಬಾಸ್ ಶೋ ಅಶ್ಲೀಲವಾಗಿದೆ ಎಂದು ಆರೋಪ ಮಾಡಿದ್ದಾರೆ. ಮನರಂಜನೆ ನೀಡಲು ಇನ್ನೂ ಬೇಕಾದಷ್ಟು ವಿಧಾನವಿದೆ. ಅಶ್ಲೀಲ ರೀತಿಯಲ್ಲಿ ಮನರಂಜನೆ ನೀಡುವ ಅಗತ್ಯವಿಲ್ಲವೆಂದು ವೀಕ್ಷಕರ ವಾದವಾಗಿದೆ. ಆದ್ರೆ ಇನ್ನು ಕೆಲ ವೀಕ್ಷಕರು ಬಿಗ್ ಬಾಸ್ ಶೋ ಇಷ್ಟಪಡುತ್ತಿದ್ದಾರೆ. ಬಿಗ್ ಬಾಸ್ ಶೋ ಮನರಂಜನೆ ನೀಡ್ತಿದೆ ಎಂದು ಕಮೆಂಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...