alex Certify ಸುಶಾಂತ್ ಗಾಗಿ ರಿಯಾ ಖರೀದಿ ಮಾಡ್ತಿದ್ಲು ಡ್ರಗ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಶಾಂತ್ ಗಾಗಿ ರಿಯಾ ಖರೀದಿ ಮಾಡ್ತಿದ್ಲು ಡ್ರಗ್ಸ್

ಬಾಲಿವುಡ್ ನಟ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಜಾಮೀನು ಅರ್ಜಿ ವಿಚಾರಣೆ ಬಾಂಬೆ ಹೈಕೋರ್ಟ್‌ನಲ್ಲಿ ನಡೆದಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ತನ್ನ ಅಫಿಡವಿಟ್ ಅನ್ನು ಹೈಕೋರ್ಟ್‌ನಲ್ಲಿ ಸಲ್ಲಿಸಿದೆ. ರಿಯಾ ಚಕ್ರವರ್ತಿ, ಸುಶಾಂತ್ ಸಿಂಗ್ ರಜಪೂತ್‌ಗೆ ಡ್ರಗ್ಸ್ ಖರೀದಿಸುತ್ತಿದ್ದಳು ಎಂಬುದನ್ನು ಸ್ಪಷ್ಟಪಡಿಸಿದೆ. ಸುಶಾಂತ್‌ ಔಷಧಿ ತೆಗೆದುಕೊಳ್ತಿದ್ರು. ಇದನ್ನು ಬಿಡಿಸಲು ರಿಯಾ ಡ್ರಗ್ಸ್ ನೀಡುವುದನ್ನು ಶುರು ಮಾಡಿದ್ದಳು ಎನ್ನಲಾಗಿದೆ.

ರಿಯಾ ಹಾಗೂ ಸಹೋದರನಿಗೆ ಜಾಮೀನು ನೀಡದಂತೆ ಎನ್ ಸಿ ಬಿ ಮನವಿ ಮಾಡಿದೆ. ಇಬ್ಬರು ಡ್ರಗ್ಸ್ ಸಿಂಡಿಕೇಟ್ ಸಕ್ರಿಯ ಸದಸ್ಯರು ಎಂದು ಎನ್ ಸಿ ಬಿ ಹೇಳಿದೆ. ರಿಯಾ ಡ್ರಗ್ಸ್ ಕಳ್ಳಸಾಗಣೆಗೆ ಹಣಕಾಸು ಒದಗಿಸುತ್ತಿದ್ದಳು ಎಂಬ ಬಗ್ಗೆ ಪುರಾವೆಗಳು ದೊರೆತಿವೆ. ವಾಟ್ಸಾಪ್ ಚಾಟ್‌ಗಳು, ಮೊಬೈಲ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಹಾರ್ಡ್ ಡಿಸ್ಕ್ ಗಳಿಂದ ಸಂಗ್ರಹಿಸಿದ ದತ್ತಾಂಶವು ರಿಯಾ ಚಕ್ರವರ್ತಿ ನಿರಂತರವಾಗಿ ಡ್ರಗ್ಸ್ ಖರೀದಿಸುತ್ತಿದ್ದಳು ಎಂಬುದನ್ನು ಸ್ಪಷ್ಟಪಡಿಸುತ್ತದೆ ಎಂದು ಅಫಿಡವಿಟ್ ನಲ್ಲಿ ತಿಳಿಸಲಾಗಿದೆ.

ಸುಶಾಂತ್ ಗೆ ಡ್ರಗ್ಸ್ ನೀಡ್ತಿದ್ದೆ ಎಂಬ ವಿಷ್ಯವನ್ನು ರಿಯಾ ಮುಚ್ಚಿಟ್ಟಿದ್ದಳು. ಡ್ರಗ್ಸ್ ಖರೀದಿ ಮಾಡ್ತಿದ್ದ ರಿಯಾ ಕ್ರೆಡಿಟ್ ಕಾರ್ಡ್, ನಗದು ಹಾಗೂ ಗೇಟ್ ವೇ ಮೂಲಕ ಹಣ ಪಾವತಿ ಮಾಡ್ತಿದ್ದಳಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...