alex Certify ಪ್ರಸಿದ್ಧ ನಟನ ಮದುವೆ ಮುರಿಯಲು ಕಾರಣವಾದ ಸಹೋದರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಸಿದ್ಧ ನಟನ ಮದುವೆ ಮುರಿಯಲು ಕಾರಣವಾದ ಸಹೋದರ

ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಅವರ ಪತ್ನಿ ಆಲಿಯಾ ವಿಚ್ಛೇದನ ಪಡೆಯಲು ನಿರ್ಧರಿಸಿದ್ದಾರೆ. ಇತ್ತೀಚೆಗೆ ಅವರು ವಾಟ್ಸಾಪ್ ಮತ್ತು ಇಮೇಲ್ ಮೂಲಕ ನವಾಜುದ್ದೀನ್ ಗೆ ವಿಚ್ಛೇದನದ ನೋಟಿಸ್ ನೀಡಿದ್ದಾರೆ. ಆದರೆ ಇದುವರೆಗೂ ನವಾಜುದ್ದೀನ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ವಿಚ್ಛೇದನದ ಜೊತೆ  ಇಬ್ಬರು ಮಕ್ಕಳನ್ನು ತನ್ನ ಕಸ್ಟಡಿಗೆ ನೀಡುವಂತೆ ಆಲಿಯಾ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ್ದ ಆಲಿಯಾ ವಿಚ್ಛೇದನಕ್ಕೆ ಕಾರಣವೇನು ಎಂಬುದನ್ನು ಹೇಳಿದ್ದರು. ನವಾಜುದ್ದೀನ್ ಸಹೋದರ ಬಿರುಕಿಗೆ ದೊಡ್ಡ ಕಾರಣ ಎಂದು ಆಲಿಯಾ ಹೇಳಿದ್ದಾರೆ. ಇಬ್ಬರು ಮದುವೆಯಾಗಿ 10 ವರ್ಷ ಕಳೆದಿದೆ. ಇಬ್ಬರು ಮಕ್ಕಳೊಂದಿಗೆ ಪ್ರೀತಿಯ ಜೀವನವನ್ನು ನಡೆಸುತ್ತಿದ್ದವರ ಮಧ್ಯೆ ಹಠಾತ್ ಬಿರುಕು ಕಾಣಿಸಿಕೊಂಡಿದೆ.

ಮದುವೆಯಾದ ಆರಂಭದಿಂದಲೂ ಸಾಕಷ್ಟು ಸಮಸ್ಯೆ ಎದುರಿಸಿದ್ದೇನೆ. ಲಾಕ್ ಡೌನ್ ವೇಳೆ ನಾನು ಬೇರೆಯಾಗುವುದು ಸೂಕ್ತವೆಂದು ಆಲೋಚನೆ ಮಾಡಿದೆ. ನನಗೆಂದು ಯಾರೂ ಇಲ್ಲ. ನಾನು ಸದಾ ಒಬ್ಬಂಟಿಯಾಗಿದ್ದೆ. ನಾನು ಮುಂದಿನ ಭವಿಷ್ಯದ ಬಗ್ಗೆ ಹೆಚ್ಚು ಆಲೋಚನೆ ಮಾಡಿಲ್ಲ. ಆದ್ರೆ ಈ ಸಂಬಂಧ ಸಾಧ್ಯವಿಲ್ಲವೆಂದು ನಿರ್ಧರಿಸಿದ್ದೇನೆ ಎಂದು ಆಲಿಯಾ ಹೇಳಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...