alex Certify ಅನಿಲ್ ಕಪೂರ್​ ಕಾಣೆಯಾಗಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿರುವುದು ಯಾಕೆ ಗೊತ್ತಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನಿಲ್ ಕಪೂರ್​ ಕಾಣೆಯಾಗಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿರುವುದು ಯಾಕೆ ಗೊತ್ತಾ…..?

ಬಾಲಿವುಡ್​ ನಟ ಅನಿಲ್​ ಕಪೂರ್​ ಹಾಗೂ ದಿವಂಗತ ನಟಿ ಶ್ರೀದೇವಿ ಅಭಿನಯದ ಮಿಸ್ಟರ್​ ಇಂಡಿಯಾ ತೆರೆಗಪ್ಪಳಿಸಿ 34 ವಸಂತಗಳೇ ಕಳೆದಿದೆ. ಈ ಸಿನಿಮಾ 3 ದಶಕಗಳನ್ನ ಪೂರೈಸಿದ್ರೂ ಸಹ ಅಭಿಮಾನಿಗಳ ಎದೆಯಲ್ಲಿ ಇನ್ನೂ ಅಚ್ಚಳಿಯದೇ ಉಳಿದಿದೆ. ಮಿಸ್ಟರ್​ ಇಂಡಿಯಾಗೆ 34 ವರ್ಷ ತುಂಬಿದ ಸಂಭ್ರಮದ ಹಿನ್ನೆಲೆ ಸಿನಿಮಾದಲ್ಲಿ ಸಹ ನಟನಾಗಿ ನಟಿಸಿದ್ದ ಸತೀಶ್​ ಕೌಶಿಕ್​​ ಈ ಚಿತ್ರದ 25ನೇ ವರ್ಷದ ಸಂಭ್ರಮಾಚರಣೆಯನ್ನ ಮಾಡುತ್ತಿದ್ದ ಅಪರೂಪದ ಫೋಟೋವೊಂದನ್ನ ಶೇರ್​ ಮಾಡಿದ್ದಾರೆ.

ಈ ಫೋಟೋದಲ್ಲಿ ಶ್ರೀದೇವಿ, ಶೇಖರ್​ ಕಪೂರ್​, ಜಾವೇದ್​ ಅಖ್ತರ್​, ದಿವಂಗತ ಗುಲ್ಶನ್​ ಖಾಣ್​ ಹಾಗೂ ಸತೀಶ್​ ಕೌಶಿಕ್​(ಎಡದಿಂದ ಬಲಕ್ಕೆ) ಇದ್ದಾರೆ. ಆದರೆ  ಅನಿಲ್​ ಕಪೂರ್​ ಮಾತ್ರ ಕಾಣುತ್ತಿಲ್ಲ. ಇದನ್ನ ಗಮನಿಸಿದ ಅಭಿಮಾನಿಗಳು ಅನಿಲ್​ ಕಪೂರ್​ ಮಿಸ್ಟರ್​​ ಇಂಡಿಯಾ ಆಗಿದ್ದಾರೆ, ಅನಿಲ್​ ಕಪೂರ್​​ ಈ ಫೋಟೋದಲ್ಲಿ ಕಾಣ್ತಿಲ್ಲ. ಬಹುಶಃ ಮಿ. ಇಂಡಿಯಾ ವಾಚ್​ ಹಾಕಿಕೊಂಡಿರಬಹುದು ಎಂದೆಲ್ಲ ಕಮೆಂಟ್​ ಮಾಡ್ತಿದ್ದಾರೆ.

ಆಟೋ ಚಾಲಕನ ಪ್ರಾಮಾಣಿಕತೆಗೆ ನೆಟ್ಟಿಗರು ಫಿದಾ……!

ಮಿಸ್ಟರ್​ ಇಂಡಿಯಾ ಸಿನಿಮಾದಲ್ಲಿ ಅನಿಲ್​ ಕಪೂರ್​ ಅರುಣ್​ ವರ್ಮಾ ಎಂಬ ಹೆಸರಿನ ಪಾತ್ರ ನಿರ್ವಹಿಸಿದ್ದಾರೆ. ಅರುಣ್​ ವರ್ಮಾ ಬಳಿ ಇದ್ದ ವಾಚ್​ನ ಸಹಾಯದಿಂದ ಆತ ಕಣ್ಮರೆಯಾಗಬಹುದಾಗಿತ್ತು. ಇದೇ ಈ ಮೂವಿಯ ಮುಖ್ಯ ವಸ್ತುವಾಗಿದೆ. ಇನ್ನು ಈ ಸಿನಿಮಾದಲ್ಲಿ ದಿವಂಗತ ಅಮ್ರಿಶ್​ ಪುರಿ ನಟಿಸಿದ್ದ ಮೊಗೆಂಬೋ ಪಾತ್ರ ಕೂಡ ಭಾರೀ ಸದ್ದು ಮಾಡಿತ್ತು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...