alex Certify ಮಿಕಾ ಸಿಂಗ್ ಹೊಸ ಹಾಡಿನಲ್ಲಿ ಸನ್ನಿ ಲಿಯೋನ್ ತದ್ರೂಪಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಿಕಾ ಸಿಂಗ್ ಹೊಸ ಹಾಡಿನಲ್ಲಿ ಸನ್ನಿ ಲಿಯೋನ್ ತದ್ರೂಪಿ

ಗಾಯಕ ಮಿಕಾ ಸಿಂಗ್ ಮತ್ತೊಂದು ಪಾರ್ಟಿ ಸಾಂಗ್ ಜೊತೆ ಬಂದಿದ್ದಾರೆ. ಪಂಜಾಬಿ ಹಾಡು ಗ್ಲಾಸಿಯನ್ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಹಾಡು ಬಿಡುಗಡೆಯಾಗ್ತಿದ್ದಂತೆ ವೈರಲ್ ಆಗಿದೆ. ಈ ಹಾಡಿನೊಂದಿಗೆ ಮಿಕಾ ಸಿಂಗ್ ಉದ್ಯಮಕ್ಕೆ ಹೊಸ ನಟಿ ಪರಿಚಯ ಮಾಡಿದ್ದಾರೆ. ಈ ನಟಿ ಹೆಸರು ಅವಿರಾ ಸಿಂಗ್.

ಮಿಕಾ ಸಿಂಗ್ ಈ ಹಾಡಿಗೆ ಸನ್ನಿ ಲಿಯೋನ್ ಗೆ ಆಫರ್ ನೀಡಿದ್ದರು. ಆದ್ರೆ ಸಮಯದ ಅಭಾವದಿಂದ ಸನ್ನಿ ಲಿಯೋನ್ ಸಾಂಗ್ ಕೈ ಬಿಟ್ಟಿದ್ದರು. ಸನ್ನಿ ಲಿಯೋನ್ ಆಫರ್ ತಿರಸ್ಕರಿಸಿದ ನಂತ್ರ ಮಿಕಾ ಹೊಸ ನಟಿಯನ್ನು ಪರಿಚಯಿಸಿದ್ದಾರೆ. ಅಮಿರಾ ಸಿಂಗ್, ಸನ್ನಿ ಲಿಯೋನ್ ಗೆ ಹೋಲುತ್ತಾರೆ. ಮಿಕಾ ಸಿಂಗ್ ಈ ಬಗ್ಗೆ ಟ್ವಿಟ್ ಕೂಡ ಮಾಡಿದ್ದಾರೆ. ಸನ್ನಿ ಲಿಯೋನ್ ವರ್ಜಿನಲ್ ಗ್ಯಾಂಗ್ ಸ್ಟಾರ್ ಎಂದಿರುವ ಮಿಕಾ ಸಿಂಗ್, ಸನ್ನಿ ಲಿಯೋನ್ ನನ್ನ ಮೆಚ್ಚಿನ ನಟಿ ಎಂಬುದನ್ನೂ ಬರೆದಿದ್ದಾರೆ. ಹಾಗೆ ಸನ್ನಿ ಲಿಯೋನ್ ಹೋಲುವ ನಟಿಯನ್ನು ನಮ್ಮ ನಿರ್ದೇಶಕರು ನಿಮ್ಮ ಮುಂದಿಟ್ಟಿದ್ದಾರೆಂದು ಮಿಕಾ ಸಿಂಗ್ ಹೇಳಿದ್ದಾರೆ.

ಮಿಕಾ ಸಿಂಗ್  ಹೊಸ ಹಾಡು 24 ಗಂಟೆಗಳಲ್ಲಿ 12 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ. ಮುಂಬರುವ ಇಂಡಿಯನ್ ಪ್ರೊ ಮ್ಯೂಸಿಕ್ ಲೀಗ್ ನಲ್ಲಿ ಮಿಕಾ ಸಿಂಗ್ ನಾಲ್ಕು ವರ್ಷಗಳ ನಂತರ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಜೊತೆ ಪ್ರದರ್ಶನ ನೀಡಲಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...