alex Certify ಮಲೆಯಾಳಿ ನಟಿಗೆ ಮಾಲ್ ನಲ್ಲಿ ಲೈಂಗಿಕ ಕಿರುಕುಳ ನೀಡಿದ್ದವರು ಅಂದರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಲೆಯಾಳಿ ನಟಿಗೆ ಮಾಲ್ ನಲ್ಲಿ ಲೈಂಗಿಕ ಕಿರುಕುಳ ನೀಡಿದ್ದವರು ಅಂದರ್

ಕೊಚ್ಚಿ: ಪ್ರಸಿದ್ಧ ಮಲೆಯಾಳಿ ನಟಿಗೆ ಮಾಲ್ ನಲ್ಲಿ ಇಬ್ಬರು ವ್ಯಕ್ತಿಗಳು ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದ್ದು, ಘಟನೆಯ‌ ಸಿಸಿ ಟಿವಿ ಚಿತ್ರಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಕೊಚ್ಚಿಯ‌ ಲುಲು ಮಾಲ್‌ನಲ್ಲಿ ಈ ಘಟನೆ ನಡೆದಿದೆ. ನಟಿ ತಮ್ಮ ಸಹೋದರ, ಸಹೋದರಿ ಹಾಗೂ ತಾಯಿಯ ಜತೆ ಶಾಪಿಂಗ್ ಗೆ ತೆರಳಿದ್ದರು. ಆ ಸಂದರ್ಭದಲ್ಲಿ ಅವರಿಗೆ ಈ ಕೆಟ್ಟ ಅನುಭವವಾಗಿದೆ. ಅದನ್ನು ಅವರು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಂತರ ಪೊಲೀಸರು ಸಿಸಿ ಟಿವಿ ಫುಟೇಜ್ ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪಿಗಳನ್ನು ಇರ್ಶಾದ್ ಹಾಗೂ ಆದಿಲ್ ಎಂದು ಗುರುತಿಸಲಾಗಿದೆ. “ನಾನು ಸಾಮಾನ್ಯವಾಗಿ ಜಾಲತಾಣಗಳಲ್ಲಿ ಹೆಚ್ಚು ವಿಷಯ‌ ಚರ್ಚಿಸುವುದಿಲ್ಲ. ಆದರೆ, ಈ ಘಟನೆ ಮತ್ಯಾರಿಗೂ ಆಗಬಾರದು. ಇದರಿಂದ ಹೊರ ಹಾಕುತ್ತಿದ್ದೇನೆ. ಮಾಲ್ ನ ಹಾಲ್ ನಲ್ಲಿ ನಾನು ಹೋಗುತ್ತಿದ್ದಂತೆ ಜನ‌ ಸೇರಿದರು. ನೂಕು ನುಗ್ಗಲಲ್ಲಿ ನನ್ನ‌ ಮೈ ಮೇಲೆ ಒಬ್ಬ ಕೈ ಹಾಕಿದ‌‌. ತಳ್ಳಾಟದಲ್ಲಿ ಅಕಸ್ಮಾತ್ ಆಗಿರಬಹುದು ಎಂದುಕೊಂಡೆ. ಆದರೆ, ಇನ್ನೊಬ್ಬ ನನ್ನ ಹಿಂಭಾಗವನ್ನು‌ ಮುಟ್ಟಿದ. ನನ್ನ ಸಹೋದರಿ ಅದನ್ನು ನೋಡಿದಳು” ಎಂದು ನಟಿ ಬರೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...