alex Certify ಹಾಡಿನ ಮೂಲಕ ಜಾಗೃತಿ ಮೂಡಿಸಿದ ಪೊಲೀಸರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಡಿನ ಮೂಲಕ ಜಾಗೃತಿ ಮೂಡಿಸಿದ ಪೊಲೀಸರು

ಶಿಲ್ಲಾಂಗ್: ಮಾದಕ ದ್ರವ್ಯ ಬಳಕೆ ಹಾಗೂ ಕಳ್ಳಸಾಗಣೆ ನಿಯಂತ್ರಣ ಹಾಗೂ ಅಪಾಯದ ಬಗ್ಗೆ ಜಾಗೃತಿಗಾಗಿ ಮೇಘಾಲಯ ಪೊಲೀಸರು ಪ್ರಸಿದ್ಧ ಹಾಡೊಂದನ್ನು ಬಳಕೆ ಮಾಡಿದ್ದಾರೆ.

ಜಾನ್ ಲೆನಿನ್ ಅವರ ಪ್ರಸಿದ್ಧ ಗೀತೆ ‘ಇಮೇಜಿನ್’ ನ ಸಾಹಿತ್ಯವನ್ನು ಬದಲಿಸಿ ಮಾದಕ‌ ದ್ರವ್ಯ ತ್ಯಜಿಸಿ ಉತ್ತಮ‌ ಸಮಾಜ ನಿರ್ಮಿಸಿ ಎಂಬ ಸಂದೇಶ ಸಾರುತ್ತಿದ್ದಾರೆ.

ಭಾನುವಾರ ಅಂತಾರಾಷ್ಟ್ರೀಯ ಸಂಗೀತ ದಿನ ಹಾಗೂ ಜೂನ್ 26 ರಂದು ನಡೆಯುವ ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನದ ಅಂಗವಾಗಿ 4 ನಿಮಿಷ 38 ಸೆಕೆಂಡ್ ಗಳ ಈ ಹಾಡನ್ನು ಬಿಡುಗಡೆ ಮಾಡಲಾಗಿದೆ.

ಮೇಘಾಲಯ ಡಿಜಿಪಿ ಆರ್.ಚಂದ್ರನಾಥ್ ಅವರು ಖಾಕಿ ವಿಬ್ಸ್ ಎಂಬ ವಿಡಿಯೋ ಹಾಡು ಬಿಡುಗಡೆಗೊಳಿಸಿದರು. “ಇಮೇಜಿನ್ ದೇರ್ ಈಸ್ ನೋ ಹೆವನ್” ಎಂಬ ಮೂಲತಃ ಸಾಹಿತ್ಯವನ್ನು ಬದಲಿಸಿ “ಇಮೇಜಿನ್ ನೋ ಎಡಿಕ್ಷನ್” ಎಂದು ಮೊದಲನೆಯ ಸಾಲು ಸೇರಿಸಲಾಗಿದೆ. ಮೇಘಾಲಯದ ಪೊಲೀಸ್ ಇಲಾಖೆಯ ಅಧಿಕೃತ ಫೇಸ್‌ಬುಕ್‌ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು, ಎರಡು ದಿನದಲ್ಲಿ 1.8 ಲಕ್ಷ ಜನರು ವೀಕ್ಷಿಸಿದ್ದು, 1600 ಜನರು ಶೇರ್ ಮಾಡಿದ್ದಾರೆ.

The Khaki Vibes

On the occasion of #WorldMusicDay & upcoming International Day Against Drug Abuse and Illicit Trafficking, and in continuation of our awareness campaign, under the guidance of Shri R. Chandranathan, IPS, DGP, we are launching an Awareness Video Song, by 'The Khaki Vibes'.

Posted by Meghalaya Police on Sunday, June 21, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...