alex Certify ಪ್ರತಿಭಟನೆ ನಡೆಯುವಾಗಲೇ ಪಕ್ಕದಲ್ಲಿದ್ದವನಿಗೆ ಅಚ್ಚರಿಗೀಡು ಮಾಡಿದ ರಿಯಾನ್ನಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿಭಟನೆ ನಡೆಯುವಾಗಲೇ ಪಕ್ಕದಲ್ಲಿದ್ದವನಿಗೆ ಅಚ್ಚರಿಗೀಡು ಮಾಡಿದ ರಿಯಾನ್ನಾ

Man Asks Woman for Instagram Handle During Anti-racism Protest Without Realising it's Rihanna

ಅಮೆರಿಕದಲ್ಲಿರುವ ಏಷ್ಯನ್-ಅಮೆರಿಕನ್ ಮಂದಿಯ ಮೇಲೆ ಇತ್ತೀಚಿನ ದಿನಗಳಲ್ಲಿ ಜನಾಂಗೀಯ ದಾಳಿಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಹಳಷ್ಟು ಅಮೆರಿಕನ್ನರು ಬೀದಿಗಿಳಿದು ಪ್ರತಿಭಟನೆ ಮಾಡಿದ್ದರು. ಈ ಪ್ರತಿಭಟನೆಗೆ ಬೆಂಬಲ ನೀಡಲು ಪಾಪ್‌ತಾರೆ ರಿಯಾನ್ನಾ ಸಹ ಸೇರಿದ್ದರು.

ನ್ಯೂಯಾರ್ಕ್‌ ನಗರದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭ ಗ್ರಾಮಿ ಪ್ರಶಸ್ತಿ ಪುರಸ್ಕೃತ ಗಾಯಕಿ ಹೋರಾಟಗಾರರ ನಡುವೆ ಕಾಣಿಸಿಕೊಂಡಿದ್ದಾರೆ. ಆದರೆ ಈ ವೇಳೆ ಮಾರುವೇಷದಲ್ಲಿ ಇದ್ದ ರಿಯಾನ್ನಾ, ಜೊತೆಯಲ್ಲಿದ್ದ ಪ್ರತಿಭಟನಾಕಾರನೊಬ್ಬ ತನ್ನ ಇನ್‌ಸ್ಟಾಗ್ರಾಂ ಹ್ಯಾಂಡಲ್‌ ಬಗ್ಗೆ ಕೇಳುತ್ತಲೇ ತನ್ನ ಗುರುತನ್ನು ತೆರೆದಿಟ್ಟಿದ್ದಾರೆ.

ಮುಷ್ಕರ ನಿರತ ಸಾರಿಗೆ ನೌಕರರಿಗೆ ಬಿಗ್ ಶಾಕ್: ವೇತನಕ್ಕೆ ತಡೆ..? ಮುಷ್ಕರ ಮುಂದುವರೆದ್ರೆ ನಷ್ಟ, ವೇತನ ಕೊಡಲೂ ಕಷ್ಟ: ಲಕ್ಷ್ಮಣ ಸವದಿ

ಆ ವ್ಯಕ್ತಿಗೆ ತನ್ನ ಬಳಿ ಇದ್ದಿದ್ದು ರಿಯಾನ್ನಾ ಎಂದು ಆಕೆ ತನ್ನ ಇನ್‌ಸ್ಟಾಗ್ರಾಂ ಹ್ಯಾಂಡಲ್‌ ಅನ್ನು ಆತನಿಗೆ ಕೊಟ್ಟ ನಂತರವಷ್ಟೇ. ಈ ಸುದ್ದಿ ಗೊತ್ತಾದ ಕೂಡಲೇ, “ಹೇಯ್‌! ಇದು ನೀವಾ,” ಎಂದು ಆತ ಉದ್ಘಾರವೆತ್ತುವ ಕ್ಷಣಗಳ ವಿಡಿಯೋವನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...