alex Certify ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ ಮುಮ್ಮಟ್ಟಿ – ಮೋಹನ್​ಲಾಲ್​ ಫೋಟೋ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ ಮುಮ್ಮಟ್ಟಿ – ಮೋಹನ್​ಲಾಲ್​ ಫೋಟೋ..!

ಮೋಹನ್​ಲಾಲ್​ ಗುರುವಾರ ಮುಮ್ಮಟ್ಟಿ ಜೊತೆಗಿನ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ. ಇತ್ತೀಚಿಗೆ ತೆಗೆದುಕೊಂಡಿರುವ ಈ ಫೋಟೋದಲ್ಲಿ ಮುಮ್ಮಟ್ಟಿ ಹಾಗೂ ಮೋಹನ್​ಲಾಲ್ ಸ್ಮೈಲ್ ​ ಮಾಡ್ತಿರೋದನ್ನ ಕಾಣಬಹುದಾಗಿದೆ.

ಮೋಹನ್​ಲಾಲ್​ ಈ ಫೋಟೋಗೆ ಸ್ನೇಹಿತನ ಜೊತೆಗೆ ಎಂಬ ಶೀರ್ಷಿಕೆ ನೀಡಿದ್ದಾರೆ. ಕೊಚ್ಚಿಯಲ್ಲಿ ಈ ಇಬ್ಬರು ಮಾಲಿವುಡ್​​ ಸ್ಟಾರ್​ಗಳು ಈ ಫೋಟೋಗೆ ಪೋಸ್​ ಕೊಟ್ಟಿದ್ದಾರೆ.‌

ಕಳೆದ ತಿಂಗಳು ನಿರ್ಮಾಪಕ ಆಂಥೋನಿ ಪೆರುಂಬವೂರ್ಸ್ ಮಗಳ ಮದುವೆ ವೇಳೆಯೂ ಮುಮ್ಮಟ್ಟಿ ಹಾಗೂ ಮೋಹನ್​ಲಾಲ್​ ಫೋಟೋ ಒಂದರಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಬ್ಲಾಕ್​ ಬಣ್ಣದ ಧಿರಿಸಿನಲ್ಲಿ ಇಬ್ಬರೂ ಪೋಸ್​ ಕೊಟ್ಟಿದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡಿತ್ತು. ಇದೀಗ ಇನ್ನೊಂದು ಫೋಟೋದಲ್ಲಿ ಮುಮ್ಮಟ್ಟಿ ಹಾಗೂ ಮೋಹನ್​ಲಾಲ್​ ಜೊತೆಯಾಗಿ ಕಾಣಿಸಿಕೊಂಡಿದ್ದು ಅಭಿಮಾನಿಗಳು ಫುಲ್​ ಖುಶ್​ ಆಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...