![](https://kannadadunia.com/wp-content/uploads/2021/01/kbb9pbubsoc049mt_1607147655.jpeg)
ಮೋಹನ್ಲಾಲ್ ಈ ಫೋಟೋಗೆ ಸ್ನೇಹಿತನ ಜೊತೆಗೆ ಎಂಬ ಶೀರ್ಷಿಕೆ ನೀಡಿದ್ದಾರೆ. ಕೊಚ್ಚಿಯಲ್ಲಿ ಈ ಇಬ್ಬರು ಮಾಲಿವುಡ್ ಸ್ಟಾರ್ಗಳು ಈ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ಕಳೆದ ತಿಂಗಳು ನಿರ್ಮಾಪಕ ಆಂಥೋನಿ ಪೆರುಂಬವೂರ್ಸ್ ಮಗಳ ಮದುವೆ ವೇಳೆಯೂ ಮುಮ್ಮಟ್ಟಿ ಹಾಗೂ ಮೋಹನ್ಲಾಲ್ ಫೋಟೋ ಒಂದರಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಬ್ಲಾಕ್ ಬಣ್ಣದ ಧಿರಿಸಿನಲ್ಲಿ ಇಬ್ಬರೂ ಪೋಸ್ ಕೊಟ್ಟಿದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡಿತ್ತು. ಇದೀಗ ಇನ್ನೊಂದು ಫೋಟೋದಲ್ಲಿ ಮುಮ್ಮಟ್ಟಿ ಹಾಗೂ ಮೋಹನ್ಲಾಲ್ ಜೊತೆಯಾಗಿ ಕಾಣಿಸಿಕೊಂಡಿದ್ದು ಅಭಿಮಾನಿಗಳು ಫುಲ್ ಖುಶ್ ಆಗಿದ್ದಾರೆ.