alex Certify ಅಚ್ಚರಿ…! ಪತಿ ನೀಡಿದ್ದ 100 ಕೋಟಿ ಮೌಲ್ಯದ ಫ್ಲ್ಯಾಟ್ ಹಿಂತಿರುಗಿಸಿದ ಮಾನ್ಯತಾ ದತ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿ…! ಪತಿ ನೀಡಿದ್ದ 100 ಕೋಟಿ ಮೌಲ್ಯದ ಫ್ಲ್ಯಾಟ್ ಹಿಂತಿರುಗಿಸಿದ ಮಾನ್ಯತಾ ದತ್

Image result for maanayata-dutt-return-sanjay-dutt-100-crore-flat-gift

ಬಾಲಿವುಡ್ ಸೂಪರ್‌ಸ್ಟಾರ್ ಸಂಜಯ್ ದತ್ ಸುಮಾರು 100 ಕೋಟಿ ಮೌಲ್ಯದ 4 ಫ್ಲ್ಯಾಟ್‌ಗಳನ್ನು ತಮ್ಮ ಪತ್ನಿ ಮಾನ್ಯತಾ ದತ್ ಗೆ ಉಡುಗೊರೆಯಾಗಿ ನೀಡಿದ್ದರು. ಈ ಫ್ಲಾಟ್‌ಗಳು ಪಾಲಿ ಹಿಲ್ಸ್ ನ ಇಂಪೀರಿಯಲ್ ಹೈಟ್ಸ್ ಕಟ್ಟಡದಲ್ಲಿವೆ. ಪ್ರೀತಿಯ ಪತ್ನಿಗೆ ಸಂಜಯ್ ನೀಡಿದ 4 ಫ್ಲ್ಯಾಟ್‌ಗಳ ಮೌಲ್ಯ 100 ಕೋಟಿ ರೂಪಾಯಿ ಎನ್ನಲಾಗಿದೆ. ಆದ್ರೆ ಈ ಫ್ಲ್ಯಾಟ್‌ ತೆಗೆದುಕೊಳ್ಳಲು ಮಾನ್ಯತಾ ದತ್ ನಿರಾಕರಿಸಿದ್ದಾರೆ. ಸಂಜಯ್ ದತ್ ಗೆ ಫ್ಲ್ಯಾಟ್ ಹಿಂತಿರುಗಿಸಿದ್ದಾರೆ.

ಮಾನ್ಯತಾ ದತ್  ನಿರ್ಧಾರ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಕಳೆದ ವರ್ಷ ಡಿಸೆಂಬರ್ 23 ರಂದು ಸಂಜಯ್ ಫ್ಲಾಟ್ ಮಾನ್ಯತಾಗೆ ಉಡುಗೊರೆಯಾಗಿ ನೀಡಿದ್ದರು. ಮಾನ್ಯತಾ ಡಿಸೆಂಬರ್ 29 ರಂದು ಅದನ್ನು ಹಿಂತಿರುಗಿಸಿದ್ದಾರೆ.

ಹೊಸ ಪೋಸ್ಟ್ ಮೂಲಕ ಬೇಬಿ ಬಂಪ್​ ಪ್ರದರ್ಶಿಸಿದ ನಟಿ ಕರೀನಾ ಕಪೂರ್​…!

ವರದಿಗಳ ಪ್ರಕಾರ, ಸಂಜಯ್ ದತ್ ಉಡುಗೊರೆಯಾಗಿ ನೀಡಿದ ಅಪಾರ್ಟ್ಮೆಂಟ್ ನಲ್ಲಿ ಬಾಲಿವುಡ್ ನ ಅನೇಕ ಕಲಾವಿದರಿದ್ದಾರೆ. ಸಂಜಯ್  ದತ್ ನೀಡಿರುವ ಎರಡು ಫ್ಲಾಟ್‌ಗಳು ಮೂರನೇ ಮತ್ತು ನಾಲ್ಕನೇ ಮಹಡಿಯಲ್ಲಿವೆ. ಉಳಿದ ಎರಡು ಫ್ಲ್ಯಾಟ್‌ಗಳು ಕಟ್ಟಡದ 11 ಮತ್ತು 12 ನೇ ಮಹಡಿಗಳಲ್ಲಿವೆ. ಈ ನಾಲ್ಕು ಫ್ಲ್ಯಾಟ್‌ಗಳ ಮಾರುಕಟ್ಟೆ ಮೌಲ್ಯ 100 ಕೋಟಿ ರೂಪಾಯಿ. ತೆರಿಗೆ ಸಂಬಂಧಿತ ವಹಿವಾಟಿನಿಂದಾಗಿ ಮಾನ್ಯತಾ ದತ್ ಫ್ಲ್ಯಾಟ್‌ಗಳನ್ನು ಹಿಂದಿರುಗಿಸಿದ್ದಾರೆ.

2020 ರ ಆಗಸ್ಟ್ ತಿಂಗಳಲ್ಲಿ  ಸಂಜಯ್ ದತ್ ಕ್ಯಾನ್ಸರ್ ಗೆ ತುತ್ತಾಗಿದ್ದರು. ಚಿಕಿತ್ಸೆಗಾಗಿ ಮುಂಬೈನ ಆಸ್ಪತ್ರೆಗೆ ದಾಖಲಿಸಲಾಯಿತು. ಸಂಜಯ್ ದತ್ ಕ್ಯಾನ್ಸರ್ ನಂತಹ ಗಂಭೀರ ರೋಗ ಗೆದ್ದು ಚಿತ್ರರಂಗಕ್ಕೆ ಮರಳಿದ್ದಾರೆ. ಸಂಜಯ್ ದತ್ ಕೊನೆಯ ಬಾರಿಗೆ ಸಡಕ್ 2 ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಆಲಿಯಾ ಭಟ್ ಕೂಡ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...