alex Certify ಅಬ್ಬಾ ಹೀಗೂ ಆಗ್ಬಹುದಾ…! ಹಿಂದಿ ಧಾರಾವಾಹಿ ದೃಶ್ಯ ನೋಡಿ ನೆಟ್ಟಿಗರ ಅಚ್ಚರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಬ್ಬಾ ಹೀಗೂ ಆಗ್ಬಹುದಾ…! ಹಿಂದಿ ಧಾರಾವಾಹಿ ದೃಶ್ಯ ನೋಡಿ ನೆಟ್ಟಿಗರ ಅಚ್ಚರಿ

Logic, What's That? Indian Actress Tripping into Suitcase and Getting Trapped Inside is Peak Television

ಭಾರತೀಯ ಟಿವಿ ಧಾರಾವಾಹಿಗಳಲ್ಲಿನ ಕೆಲ ದೃಶ್ಯಗಳ ನಾಟಕೀಯತೆ ನೆಟ್ ಜಗತ್ತಿನಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗುತ್ತದೆ. ಮಿಮ್ಸ್ ಗಳಾಗಿ ಹರಿದಾಡುತ್ತವೆ. ಹಿಂದೆ ಗೋಪಿ ಬಹು ಲ್ಯಾಪ್ ‌ಟಾಪ್ ತೊಳೆಯುತ್ತಿರುವ ದೃಶ್ಯ ವೈರಲ್ ಆಗಿತ್ತು. “ರಸೋದೆಮೆ ಕೋನ್‌ ಥಾ” ಎಂಬ ದೃಶ್ಯ ಜಾಲತಾಣಗಳಲ್ಲಿ ಮಿಮ್ ಗಳಾಗಿ ದೊಡ್ಡ ಸದ್ದು ಮಾಡಿತ್ತು. ಈಗ “ಇಶ್ಕ್ ಮೆ ಮರ್ ಜಾವಾ 2” ಎಂಬ ಧಾರಾವಾಹಿಯ ನಾಟಕೀಯ ದೃಶ್ಯಾವಳಿಯೊಂದು ಫುಲ್ ವೈರಲ್ ಆಗಿದೆ.

ಹಿರೋಯಿನ್ ರಿಧಿಮಾ ವಂಶಾ ಪಾತ್ರ ನಿರ್ವಹಿಸುತ್ತಿರುವ ನಟಿ ಹ್ಯಾಲಿ ಸಹಾ ಈ ದೃಶ್ಯದಲ್ಲಿ ಏನೋ ಯೋಚಿಸುತ್ತ ನಡೆಯುತ್ತಿರುತ್ತಾರೆ. ಆಗ ಕಾಲಿಗೆ ಸೂಟ್ ಕೇಸ್ ಒಂದು ಹಾಯ್ದು ಆಯತಪ್ಪಿ ಬೀಳುತ್ತಾರೆ‌. ಬೀಳುವಾಗ ಅವರ ತಲೆ ಗೋಡೆಗೆ ಬಡಿದು ಎಚ್ಚರ ತಪ್ಪುತ್ತಾರೆ. ಅಚ್ಚರಿ ಎಂದರೆ ಅವರು ಬಿದ್ದಿದ್ದು ನೆಲಕ್ಕಲ್ಲ. ಸೂಟ್ ಕೇಸ್ ಒಳಗೆ. ಅವರು ಸೂಟ್ ಕೇಸ್ ಒಳಗೆ ಫಿಟ್ ಆಗಿ ಬೀಳುತ್ತಿದ್ದಂತೆ ಅದು ಮುಚ್ಚಿಕೊಳ್ಳುತ್ತದೆ. ಇನ್ನೊಬ್ಬ ವ್ಯಕ್ತಿ ಸೂಟ್ ಕೇಸ್ ನ್ನು ಎಳೆದುಕೊಂಡು ಹೋಗಿ ಸ್ವಿಮಿಂಗ್ ಫೂಲ್ ಗೆ ಎಸೆಯುತ್ತಾನೆ.

ಅದೇ ಹೊತ್ತಿಗೆ ವಂಶಾ ರೈಸಿಂಘಾನಿಯಾ ಪಾತ್ರ ನಿರ್ವಹಿಸುತ್ತಿರುವ ನಟ ರಾಹುಲ್ ಸುಧೀರ್ ಬಂದು ಸೂಟ್ ಕೇಸ್ ನೀರಿನಲ್ಲಿ‌ ಮುಳುಗುತ್ತಿರುವುದನ್ನು ನೋಡುತ್ತಾರೆ. ಈ ದೃಶ್ಯವನ್ನು ನೋಡಿ ನೆಟ್ಟಿಗರು ಹೀಗೂ ಆಗಬಹುದೇ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.‌

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...