alex Certify ಮನಸ್ಸಿಗೆ ಮುದ ನೀಡುತ್ತೆ ಪುಟ್ಟ ಬಾಲಕನ ಈ ಮುದ್ದಾದ ಹಾಡು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನಸ್ಸಿಗೆ ಮುದ ನೀಡುತ್ತೆ ಪುಟ್ಟ ಬಾಲಕನ ಈ ಮುದ್ದಾದ ಹಾಡು..!

ಈಗಂತೂ ಎತ್ತ ನೋಡಿದ್ರೂ ಕೋವಿಡ್​ನದ್ದೇ ಸುದ್ದಿ. ಕೊರೊನಾ ಸಾವು ನೋವುಗಳ ಬಗ್ಗೆ ಕೇಳ್ತಾ ಇದ್ದರೆ ತಲೆ ಕೆಟ್ಟುಹೋದಂತಾಗುತ್ತೆ. ಪ್ರಸ್ತುತ ಅನೇಕರು ತಮ್ಮ ಪ್ರೀತಿಪಾತ್ರರ ಜೀವ ಉಳಿಸಲು ಆಕ್ಸಿಜನ್​, ಬೆಡ್​ ಸೇರಿದಂತೆ ವಿವಿಧ ವೈದ್ಯಕೀಯ ಸೌಲಭ್ಯಗಳ ಹುಡುಕಾಟದಲ್ಲೇ ವ್ಯಸ್ತವಾಗಿದ್ದಾರೆ. ಈ ಕಠಿಣ ಸಂದರ್ಭದಲ್ಲಿ ನಿಮ್ಮ ಮನಸ್ಸನ್ನ ತಿಳಿಯಾಗಿಸುವಂತವ ಮುದ್ದಾದ ವಿಡಿಯೋವೊಂದು ಇಲ್ಲಿದೆ ನೋಡಿ.

ಈ ವಿಡಿಯೋದಲ್ಲಿ ಪುಟ್ಟ ಬಾಲಕ ಐಕಾನಿಕ್​ ಗೀತೆ ಬ್ಲೋವಿನ್​ ಇನ್​ ದ ವಿಂಡ್​ ಹಾಡನ್ನ ತನ್ನ ಸುಮಧುರ ಕಂಠದಲ್ಲಿ ಹಾಡಿದ್ದಾನೆ. ಇಂಡಿಯನ್​ ಪ್ಯೂಶನ್​ ಬ್ರ್ಯಾಂಡ್ ಅದ್ವೈತಾದ ಚಿಂತಾಮಣಿ ಈ ಮುದ್ದಾದ ವಿಡಿಯೋವನ್ನ ಶೇರ್​ ಮಾಡಿದ್ದಾರೆ. 2.15 ನಿಮಿಷದ ವಿಡಿಯೋದಲ್ಲಿ 7 ವರ್ಷದ ಬಾಲಕ ಅತ್ಯಂತ ಸುಮಧುರವಾಗಿ ಹಾಡಿದ್ರೆ ಬಾಲಕನ ತಂದೆ ಗಿಟಾರ್​ ನುಡಿಸುತ್ತಿದ್ದಾರೆ.

1963ರ ಕಾಲದ ಈ ಗೀತೆ ಸ್ವಾತಂತ್ರ್ಯ, ಯುದ್ಧ ಹಾಗೂ ಶಾಂತಿಯ ಬಗ್ಗೆ ಹೇಳುತ್ತೆ. ಈ ಹಾಡಿನ ಮೂಲಕ ಅಮೆರಿಕ ಗಾಯಕ ಹಾಗೂ ಗೀತರಚನೆಕಾರ ಮಾನವ ಸಮಾಜದ ಹೇಗಿದೆ ಅನ್ನೋದನ್ನ ತುಂಬಾ ಅಚ್ಚುಕಟ್ಟಾಗಿ ಹೇಳಿದ್ದಾರೆ. ಕೊರೊನಾದಂತಹ ಈ ಕಷ್ಟದ ಸಂದರ್ಭದಲ್ಲಿ ಈ ಹಾಡಿನ ಸಾಹಿತ್ಯ ಇನ್ನಷ್ಟು ಹತ್ತಿರ ಎನಿಸೋದ್ರಲ್ಲಿ ಎರಡು ಮಾತಿಲ್ಲ.

— Gaurav Chintamani (@g_chintamani) April 27, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...