alex Certify ನಟ ಸೋನು ಸೂದ್ ಲೋಕಲ್ ಟ್ರೈನ್ ಪಾಸ್ ಫೋಟೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟ ಸೋನು ಸೂದ್ ಲೋಕಲ್ ಟ್ರೈನ್ ಪಾಸ್ ಫೋಟೋ ವೈರಲ್

ಮುಂಬೈ: ಬಾಲಿವುಡ್ ನಟ ಸೋನು ಸೂದ್ ವಲಸೆ ಕಾರ್ಮಿಕರಿಗೆ ಸಹಾಯ ಮಾಡುವ ಮೂಲಕ ನಿಜ ಜೀವನದ “ನಾಯಕ” ಎನಿಸಿದ್ದಾರೆ.

ತಮ್ಮ ಊರಿಗೆ ಹೋಗುವವರಿಗೆ ಬಸ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ‌. ಹಲವರಿಗೆ ಊಟ ಕೊಟ್ಟಿದ್ದಾರೆ.
ಕಷ್ಟಕ್ಕೊಳಗಾದವರ ಸಹಾಯಕ್ಕಾಗಿ ಟೋಲ್‌ ಫ್ರೀ ಸಂಖ್ಯೆ (18001213711) ಪ್ರಾರಂಭಿಸಿದ್ದಾರೆ.

ಇದರ ಮಧ್ಯೆ ಬಹಳ ಕಾಲದ ಹಿಂದೆ ಸೋನು ಸೂದ್ ಪ್ರಯಾಣ ಮಾಡಿದ 420 ರೂ.ಗಳ ರೈಲ್ವೆ ಪಾಸ್ ನ್ನು ಟ್ವೀಟ್ ಮಾಡಿ ನೆಟ್ಟಿಗರು ಸೂದ್ ಅವರ ಶ್ಲಾಘನೆ ಮಾಡುತ್ತಿದ್ದಾರೆ.

ಅರವಿಂದ ಪಾಂಡೆ ಎಂಬ ಟ್ವಿಟರ್ ಬಳಕೆದಾರರೊಬ್ಬರು ಪಾಸ್ ನ ಫೋಟೋ ಅಪ್ ಲೋಡ್ ಮಾಡಿದ್ದು,
“ಯಾರು ಜೀವನದಲ್ಲಿ ಕಷ್ಟಪಟ್ಟಿರುತ್ತಾರೋ ಅವರಿಗೆ ಇತರರ ಕಷ್ಟ ಅರ್ಥವಾಗುತ್ತದೆ. ಸೋನು ಸೂದ್ 420 ರೂ.ಗಳ ಲೋಕಲ್ ಟ್ರೇನ್ ಪಾಸ್ ಪಡೆದು ಓಡಾಡುತ್ತಿದ್ದರು” ಎಂದು ಟ್ವೀಟ್ ಮಾಡಿದ್ದಾರೆ. ಸೋನು ಸೂದ್ ಅದನ್ನು ರೀ ಟ್ವೀಟ್ ಮಾಡಿ “ಜೀವನ ಒಂದು ವೃತ್ತ” ಎಂದು ಬರೆದಿದ್ದಾರೆ.

ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶಿಯಾರಿ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಹಾಗೂ ಪಂಜಾಬ್ ಸಿಎಂ ಅಮರೀಂದ್ರ ಸಿಂಗ್ ಅವರು ಸೂದ್ ಅವರ ಕಾರ್ಯ ಶ್ಲಾಘಿಸಿ ಅಭಿನಂದನೆ ಸಲ್ಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...