alex Certify 300 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ಕೋಟಿಗೊಬ್ಬ 3’ ಬಿಡುಗಡೆ, ಮುಗಿಲು ಮುಟ್ಟಿದ ಅಭಿಮಾನಿಗಳ ಸಂಭ್ರಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

300 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ಕೋಟಿಗೊಬ್ಬ 3’ ಬಿಡುಗಡೆ, ಮುಗಿಲು ಮುಟ್ಟಿದ ಅಭಿಮಾನಿಗಳ ಸಂಭ್ರಮ

ಬೆಂಗಳೂರು: ಆಯುಧ ಪೂಜೆಯೆಂದು ಬಿಡುಗಡೆಯಾಗಬೇಕಿದ್ದ ‘ಕೋಟಿಗೊಬ್ಬ 3’ ವಿಜಯದಶಮಿ ದಿನ ಭರ್ಜರಿಯಾಗಿ ಬಿಡುಗಡೆಯಾಗುತ್ತಿದೆ.

ರಾಜ್ಯಾದ್ಯಂತ ಇಂದು ‘ಕೋಟಿಗೊಬ್ಬ 3’ ಸಿನಿಮಾ 300 ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಬಿಡುಗಡೆಯಾಗುತ್ತಿದೆ. ನಿನ್ನೆ ಬಿಡುಗಡೆಯಾಗಬೇಕಿತ್ತಾದರೂ, ಕಾರಣಾಂತರದಿಂದ ವಿಳಂಬವಾಗಿತ್ತು. ಕೊನೆಕ್ಷಣದಲ್ಲಿ ವಿತರಕರನ್ನು ಬದಲಾವಣೆ ಮಾಡಿ ಜಾಕ್ ಮಂಜು ಮತ್ತು ಗಂಗಾಧರ್ ಸಾರಥ್ಯದಲ್ಲಿ ಇಂದು 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ಕೋಟಿಗೊಬ್ಬ 3’ ಬಿಡುಗಡೆಯಾಗಲಿದೆ.

ನಿನ್ನೆ ನಿರಾಸೆಯಾಗಿ ಅಭಿಮಾನಿಗಳು ಗಲಾಟೆ ಮಾಡಿದ್ದರು. ಇಂದು ಯಾವುದೇ ಸಮಸ್ಯೆ ಇಲ್ಲದೇ ಸಿನಿಮಾ ಭರ್ಜರಿಯಾಗಿ ಬಿಡುಗಡೆಯಾಗ್ತಿದ್ದು, ಬೆಳಗ್ಗೆಯಿಂದಲೇ ಶೋ ಶುರುವಾಗಿವೆ. ಥಿಯೇಟರ್ ಗಳ ಬಳಿ ಸುದೀಪ್ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...