ಕರೊನಾ ವೈರಸ್ ಎಚ್ಚರಿಕೆ ನಡುವೆಯೇ ದೇಶದಲ್ಲಿ ನವರಾತ್ರಿ ಹಬ್ಬವನ್ನ ಆಚರಿಸಲಾಗ್ತಾ ಇದೆ. ಕೊಲ್ಕತ್ತಾದ ದುರ್ಗಾ ಪೂಜಾ ಕಮಿಟಿ ಈಗಾಗಲೇ ಸಾಕಷ್ಟು ದೇವಿ ಮೂರ್ತಿಗಳನ್ನ ಪೂಜೆಗೆ ಇರಿಸಿದ್ದು ಒಂದೊಂದು ದೇವಿ ಮೂರ್ತಿಯೂ ಈ ಬಾರಿಯ ಕರೊನಾದ ಕತೆಯನ್ನೇ ಹೇಳುತ್ತಿದೆ. ಇದೀಗ ಈ ಕಮಿಟಿ ಕರೊನಾದ ಸಮಯದಲ್ಲಿ ಬಡವರಿಗೆ ಹೆಗಲಾಗಿ ನಿಂತ ಬಾಲಿವುಡ್ ನಟ ಸೋನು ಸೂದ್ರನ್ನ ಗೌರವಿಸಿದೆ .
ಕರೊನಾ ಸಮಯದಲ್ಲಿ ವಲಸೆ ಕಾರ್ಮಿಕರು ಹುಟ್ಟೂರಿಗೆ ವಾಪಸ್ಸಾಗಲು ಪಟ್ಟ ಪಾಡು ಅಷ್ಟಿಷ್ಟಲ್ಲ. ಇಂತಹ ಸಂದರ್ಭದಲ್ಲಿ ಸೋನು ಸೂದ್ ಕಾರ್ಮಿಕರಿಗೆ ಕೈಲಾದ ಸಹಾಯ ಮಾಡಿದ್ದಾರೆ. ಈ ಮಾನವೀಯ ಬುದ್ಧಿ ಇತರರಿಗೆ ಮಾದರಿಯಾಗಬೇಕು ಅನ್ನೋ ಕಾರಣದಿಂದ ಈ ರೀತಿಯ ಮೂರ್ತಿಗಳನ್ನ ಮಾಡಿದ್ದೇವೆ ಅಂತಾರೆ ಪ್ರಫುಲ್ಲಾ ಕನಕ್ ಅಸೋಸಿಯೇಷನ್ನ ಶ್ರೀಂಜಯ್ ದತ್.
ಕೊಲ್ಕತ್ತಾದಲ್ಲಿ ತಯಾರಾಗಿರೋ ಕಲಾಕೃತಿಯಲ್ಲಿ ಕೆಲ ಕಾರ್ಮಿಕರು ಸೈಕಲ್ನಲ್ಲಿ ಮನೆಗೆ ಹೋಗ್ತಾ ಇದ್ರೆ, ಇನ್ನು ಕೆಲವರು ರೈಲು ನಿಲ್ದಾಣದಲ್ಲಿ ಮಲಗಿದ್ದಾರೆ. ಮತ್ತೆ ಕೆಲವರು ದಾರಿಯಲ್ಲಿ ಟ್ರಕ್ಗಳಿಗೆ ಕೈ ಮಾಡ್ತಾ ಇದಾರೆ. ಇವರಿಗೆಲ್ಲ ನಟ ಸೋನು ಸೂದ್ ಬಸ್ಗಳ ಸೌಕರ್ಯ ಕಲ್ಪಿಸಿಕೊಡ್ತಿರುವ ರೀತಿಯಲ್ಲಿ ಕಲಾಕೃತಿಯನ್ನ ನಿರ್ಮಿಸಲಾಗಿದೆ .