alex Certify ಎಲಿ ಅವ್ರಾಮ್ ಜೊತೆಗಿನ ಅಮೀರ್ ಡಾನ್ಸ್ ವಿಡಿಯೋ ಲೀಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಲಿ ಅವ್ರಾಮ್ ಜೊತೆಗಿನ ಅಮೀರ್ ಡಾನ್ಸ್ ವಿಡಿಯೋ ಲೀಕ್

ನಟ ಅಮೀರ್ ಖಾನ್ ಸ್ನೇಹಿತ ಅಮೀನ್ ಹಾಜಿಯ ʼಕೊಯಿ ಜಾನೆ ನಾʼ ಚಿತ್ರದಲ್ಲಿ ವಿಶೇಷ ಡಾನ್ಸ್ ಮಾಡಲಿದ್ದಾರೆ. ಕೆಲ ದಿನಗಳ ಹಿಂದೆ ಜೈಪುರಕ್ಕೆ ತೆರಳಿದ್ದ ಅಮೀರ್ ಡಾನ್ಸ್ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದರು. ಈಗ ಈ ವಿಡಿಯೋ ವೈರಲ್ ಆಗಿದೆ. ನಟ ಅಮೀರ್ ಖಾನ್ ಹಾಗೂ ಎಲಿ ಅವ್ರಾಮ್ ಡಾನ್ಸ್ ಮಾಡ್ತಿರುವ ವಿಡಿಯೋ ಇದಾಗಿದೆ.

ಎಲಿ ಶಾರ್ಟ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅಮೀರ್ ಈ ಡಾನ್ಸ್ ಅಭಿಮಾನಿಗಳಿಗೆ ಇಷ್ಟವಾಗಿದೆ. ಈ ಚಿತ್ರದಲ್ಲಿ ಕುನಾಲ್ ಕಪೂರ್ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೆಲ ಗಂಟೆಗಳ ಹಿಂದೆ ಕುನಾಲ್, ಚಿತ್ರ ತಂಡದ ಜೊತೆಗಿರುವ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಅಮೀರ್ ಖಾನ್ ಇದ್ದಾರೆ. ಅಮೀರ್ ಜೊತೆ ಸ್ಕ್ರೀನ್ ಹಂಚಿಕೊಳ್ಳಲು ಉತ್ಸುಕನಾಗಿದ್ದೇನೆಂದು ಕುನಾಲ್ ಬರೆದುಕೊಂಡಿದ್ದಾರೆ.

ಈ ಚಿತ್ರವನ್ನು ಭೂಷನ್ ಕುಮಾರ್ ನಿರ್ಮಾಣ ಮಾಡ್ತಿದ್ದಾರೆ. ಇದು ಸೈಕಲಾಜಿಕಲ್ ಥ್ರಿಲ್ಲರ್ ಡ್ರಾಮಾ ಎಂದು ಚಿತ್ರತಂಡ ಹೇಳಿದೆ. ಅಮೀನ್ ಹಾಗೂ ಅಮೀರ್ ಖಾನ್ ಹಳೆ ಸ್ನೇಹಿತರು. ಲಗಾನ್, ಮಂಗಲ್ ಪಾಂಡೆ ಚಿತ್ರಗಳಲ್ಲೂ ಅಮೀನ್ ಕಾಣಿಸಿಕೊಂಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...