alex Certify ಸಿನಿ ಪ್ರಿಯರು‌ ಎಂದಿಗೂ ಮರೆಯಲಾರರು ಈ ಡೈಲಾಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿನಿ ಪ್ರಿಯರು‌ ಎಂದಿಗೂ ಮರೆಯಲಾರರು ಈ ಡೈಲಾಗ್

ಬಾಲಿವುಡ್​​ನ ದಿವಂಗತ ನಟ ಅಮ್ಜಾದ್​ ಖಾನ್​ ತನ್ನ ನೆಗೆಟಿವ್​ ಶೇಡ್​ ಪಾತ್ರಗಳಿಂದಲೇ ಚಿತ್ರರಂಗವನ್ನ ಆಳಿದ್ದ ಮೇರು ನಟ. ಅದರಲ್ಲೂ ಹಿಂದಿ ಸಿನಿ ರಂಗದಲ್ಲೇ ಧೂಳೆಬ್ಬಿಸಿದ್ದ ಸಿನಿಮಾ ಶೂಲೆಯಲ್ಲಿ ಅಮ್ಜಾದ್​ ಖಾನ್​ ಪಾತ್ರ ನಿರ್ವಹಿಸಿದ್ದ ಗಬ್ಬರ್​ ಸಿಂಗ್​​ ಈಗಲೂ ಸಿನಿ ಪ್ರಿಯರ ಮನಸ್ಸಲ್ಲಿ ಜೀವಂತವಾಗಿದೆ. ಅದರಲ್ಲೂ ಗಬ್ಬರ್​ ಸಿಂಗ್​ ಕಿತನೇ ಆದ್ಮಿ ಥೆ ರೇ..? ಎಂಬ ಡೈಲಾಗ್​ ಈಗಲೂ ಎವರ್​ ಟ್ರೆಂಡಿಂಗ್​.

ಅಂದಹಾಗೆ ದಿವಂಗತ ನಟ ಅಮ್ಜಾದ್​ ಖಾನ್​ಗೆ ಗುರುವಾರ ಬರ್ತಡೇ ಸಂಭ್ರಮ. ಸಿನಿ ಲೋಕದ ದಂತಕತೆ ಅಮ್ಜಾದ್​​ ಖಾನ್​ರ ಕಿತನೇ ಆದ್ಮಿ ಥೆ ರೇ ಎಂಬ ಪದವನ್ನ ನೀವು ಗೂಗಲ್​ನಲ್ಲಿ ಟೈಪ್​ ಮಾಡಿದ್ರೆ ನಿಮಗೊಂದು ಸಪ್ರ್ರೈಸ್​ ಕಾಣಸಿಗುತ್ತಿತ್ತು. ಕೂಡಲೇ ಕಾಲ್ಕುಲೇಟರ್​ ಓಪನ್​ ಆಗಿ ಅದರಲ್ಲಿ 2 ಎಂಬ ಉತ್ತರವನ್ನ ತೋರಿಸುತ್ತಿತ್ತು. ಅಂದಹಾಗೆ ಗಬ್ಬರ್​ ಸಿಂಗ್​ ಸಿನಿಮಾದಲ್ಲಿ ಈ ಡೈಲಾಗ್​ನ್ನ ಹೇಳೋವಾಗ ಅಲ್ಲಿ ಇದ್ದದ್ದೂ ಎರಡೇ ಜನ ಅನ್ನೋದನ್ನ ಮರೆಯೋ ಹಾಗಿಲ್ಲ.

ಅಂದಹಾಗೆ ಇದೇನು ಗೂಗಲ್​ನ ಹೊಸ ಅನ್ವೇಷಣೆಯೇನು ಅಲ್ಲ. ಕಳೆದ ವರ್ಷವೂ ಈ ವಿಚಾರ ಬಹಳ ಪಾಪ್ಯೂಲರ್​ ಆಗಿತ್ತು. ಆದರೆ ಅಮ್ಜಾದ್​ ಖಾನ್​ ಬರ್ತ ಡೇ ಹಿನ್ನೆಲೆ ನೆಟ್ಟಿಗರು ಈ ವಿಚಾರವನ್ನ ಮತ್ತೊಮ್ಮೆ ಹಂಚಿಕೊಳ್ತಾ ಇದ್ದಾರೆ.

— Abhishek Baxi (@baxiabhishek) November 12, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...