![](https://kannadadunia.com/wp-content/uploads/2020/12/15445415995c0fd59f5f55c.jpeg)
2 ವರ್ಷಗಳ ಎಸ್ಎಸ್ಆರ್ ಮನ್ಸೂರ್ ಎಂಬ ಹ್ಯಾಶ್ಟ್ಯಾಗ್ನಲ್ಲಿ ಅಭಿಷೇಕ್ ಕಪೂರ್ ಈ ಫೋಟೋಗಳನ್ನ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೇ ಸುಶಾಂತ್ ಸಿಂಗ್ ರಜಪೂತ್ ಜೊತೆ ಕಳೆದ ಅಮೂಲ್ಯ ಕ್ಷಣಗಳನ್ನೂ ನೆನಪಿಸಿಕೊಂಡ ಅಭಿಷೇಕ್, ನಾನು ಮನ್ಸೂರ್ ಪಾತ್ರದ ಬಗ್ಗೆ ಸುಶಾಂತ್ ಜೊತೆ ಚರ್ಚೆ ಮಾಡುತ್ತಿದ್ದಾಗ ಅವರು ಕೈ ಮೇಲೆ ಏನನ್ನೋ ಬರೆದುಕೊಳ್ತಿದ್ದರು. ಅದೇನು ಅಂತಾ ಕೇಳಿದ್ರೆ ನನ್ನ ವಿಶ್ವವನ್ನ ಸೇರಿಸುತ್ತಿದ್ದೇನೆ ಎಂದು ಹೇಳಿದ್ದರಂತೆ.