alex Certify ಕೊರೋನಾ ಎರಡನೆ ಅಲೆಯಿಂದ ನಲುಗಿದ ಬಾಲಿವುಡ್ ಇಂಡಸ್ಟ್ರಿ: ಮತ್ತೊಬ್ಬ ಸೆಲೆಬ್ರಿಟಿಗೆ ಕೊರೊನಾ ಸೋಂಕು: ಹೋಂ ಕ್ವಾರಂಟೈನ್ ನಲ್ಲಿ ಕತ್ರಿನಾ ಕೈಫ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೋನಾ ಎರಡನೆ ಅಲೆಯಿಂದ ನಲುಗಿದ ಬಾಲಿವುಡ್ ಇಂಡಸ್ಟ್ರಿ: ಮತ್ತೊಬ್ಬ ಸೆಲೆಬ್ರಿಟಿಗೆ ಕೊರೊನಾ ಸೋಂಕು: ಹೋಂ ಕ್ವಾರಂಟೈನ್ ನಲ್ಲಿ ಕತ್ರಿನಾ ಕೈಫ್

ಮುಂಬೈ: ಬಾಲಿವುಡ್ ನ ಮತ್ತೊಬ್ಬ ಸೆಲೆಬ್ರಿಟಿಗೆ ಕೊರೋನಾ ಪಾಸಿಟಿವ್ ರಿಪೋರ್ಟ್ ಬಂದಿದೆ. ನಟಿ ಕತ್ರಿನಾ ಕೈಫ್ ಅವರಿಗೆ ಕೊರೋನಾ ಪಾಸಿಟಿವ್ ರಿಪೋರ್ಟ್ ಬಂದಿದೆ. ಅವರು ಹೋಂ ಕ್ವಾರಂಟೈನ್ ನಲ್ಲಿದ್ದಾರೆ.

ತಮಗೆ ಕೊರೊನಾ ಸೋಂಕು ತಗುಲಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಕತ್ರಿನಾ ಕೈಫ್, ನನಗೆ ಕೊರೊನಾ ಸೋಂಕು ತಗುಲಿದೆ. ನನ್ನೊಂದಿಗೆ ಸಂಪರ್ಕಕ್ಕೆ ಬಂದವರು ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಜೊತೆಗೆ ಸುರಕ್ಷಿತವಾಗಿರಿ ಕಾಳಜಿ ವಹಿಸಿ, ನಿಮ್ಮೆಲ್ಲರ ಪ್ರೀತಿ ಬೆಂಬಲಕ್ಕೆ ಧನ್ಯವಾದಗಳು. ವೈದ್ಯರ ಸಲಹೆ ಮೇರೆಗೆ ಎಲ್ಲಾ ಸುರಕ್ಷತೆ ಕ್ರಮಗಳೊಂದಿಗೆ ಮಾರ್ಗಸೂಚಿ ಅನುಸರಿಸುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಕೊರೋನಾ ಎರಡನೆಯ ಅಲೆಯಿಂದ ಬಾಲಿವುಡ್ ಇಂಡಸ್ಟ್ರಿ ನಲುಗಿಹೋಗಿದೆ. ಅಕ್ಷಯ್ ಕುಮಾರ್, ಗೋವಿಂದ, ವಿಕಿ ಕೌಶಲ್, ಅಮೀರ್ ಖಾನ್, ಭೂಮಿ ಪೆಡ್ನೇಕರ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳಿಗೆ ಸೋಂಕು ತಗುಲಿದ ಪರಿಣಾಮ ಅನೇಕ ಸಿನಿಮಾಗಳ ಚಿತ್ರೀಕರಣ ಸ್ಥಗಿತವಾಗಿದೆ. ಕೆಲವು ಸಿನಿಮಾಗಳ ಚಿತ್ರೀಕರಣ ಮುಂದೂಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...