ಬಾಲಿವುಡ್ ಬೆಡಗಿ ಕರೀನಾ ಕಪೂರ್ ಖಾನ್ ತಮ್ಮ ಆಕ್ಟಿಂಗ್ ಸ್ಕಿಲ್ ಜೊತೆ ಜೊತೆಗೆ ಡ್ರೆಸ್ಸಿಂಗ್ ಸೆನ್ಸ್ ಮೂಲಕವೂ ಸುದ್ದಿಯಲ್ಲಿರುವ ನಟಿ. 2016ರಲ್ಲಿ ತೈಮೂರ್ ಅಲಿ ಖಾನ್ಗೆ ಗರ್ಭಿಣಿಯಾಗಿದ್ದಾಗಲೂ ಪ್ರೆಗ್ನೆಂಟ್ ಗಳಿಗೆ ಸೂಟ್ ಆಗುವಂತಹ ಡ್ರೆಸ್ಗಳನ್ನ ಹಾಕಿ ಹೊಸ ಟ್ರೆಂಡ್ ಸೆಟ್ ಮಾಡಿದ್ರು. ಇದೀಗ ಎರಡನೇ ಬಾರಿ ಗರ್ಭಿಣಿಯಾಗಿರೋ ಕರೀನಾ ಕಪೂರ್ ಮತ್ತೆ ತಮ್ಮ ಮೆರ್ಟನಿಟಿ ಲುಕ್ನ್ನ ಮೆಂಟೇನ್ ಮಾಡ್ತಿದ್ದಾರೆ,
ಸೈಫ್ ಅಲಿ ಖಾನ್ ಜೊತೆ ಜಾಹೀರಾತೊಂದರಲ್ಲಿ ಭಾಗಿಯಾಗಿರೋ ಕರೀನಾ ಝಾರಾ ಕಂಪನಿಯ ಸ್ಯಾಟಿನ್ ಬಟ್ಟೆಯನ್ನ ಧರಿಸಿದ್ದಾರೆ. ಪೊಲ್ಕಾ ಡಾಟ್ ಡಿಸೈನ್ ಹೊಂದಿರೋ ಈ ಡ್ರೆಸ್ನ ಬೆಲೆ 3.1 ಸಾವಿರ ಅಂತಾ ಹೇಳಲಾಗಿದೆ. ಅಂದಹಾಗೆ ಈ ಹಿಂದೆ ಅನುಷ್ಕಾ ಶರ್ಮಾ ಕೂಡ ಕಪ್ಪು ಬಣ್ಣದ ಪೊಲ್ಕಾ ಡಿಸೈನ್ ಡ್ರೆಸ್ ಹಾಕಿ ತಾವು ಗರ್ಭಿಣಿ ಎಂಬ ವಿಚಾರವನ್ನ ಬಹಿರಂಗಪಡಿಸಿದ್ದರು,