alex Certify ನಟಿ ದಿಯಾ ಮಿರ್ಜಾ ಜನ್ಮದಿನಕ್ಕೆ ಶುಭಾಶಯಗಳ ಸುರಿಮಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿ ದಿಯಾ ಮಿರ್ಜಾ ಜನ್ಮದಿನಕ್ಕೆ ಶುಭಾಶಯಗಳ ಸುರಿಮಳೆ

ಬಾಲಿವುಡ್​ ನಟಿ ಹಾಗೂ ಮಾಜಿ ಮಿಸ್​ ಇಂಡಿಯಾ ದಿಯಾ ಮಿರ್ಜಾ 39ನೇ ವಸಂತಕ್ಕೆ ಕಾಲಿಟ್ಟಿದ್ದು ಬಾಲಿವುಡ್​ನ ಗಣ್ಯಾತಿಗಣ್ಯರು ಬಟ್ಟಲುಗಣ್ಣಿನ ಚೆಲುವೆಗೆ ಶುಭಾಶಯಗಳ ಸುರಿಮಳೆಯನ್ನೇ ಹರಿಸಿದ್ದಾರೆ.

ದಿಯಾ ಮಿರ್ಜಾ ಜೊತೆಗಿನ ಫೊಟೋ ಶೇರ್​ ಮಾಡಿದ ನಟಿ ತಾಪ್ಸಿ ಪನ್ನು ಗೆಳತಿಗೆ ಹುಟ್ಟುಹಬ್ಬದ ಶುಭಕೋರಿದ್ದಾರೆ. ಸಂಜು ಚಿತ್ರದಲ್ಲಿ ದಿಯಾ ಜೊತೆ ನಟಿಸಿದ್ದ ಅನುಷ್ಕಾ ಶರ್ಮಾ ಕೂಡ ಜೀವನದಲ್ಲಿ ಸುಂದರವಾದ ವಿಚಾರಗಳೇ ತುಂಬಿರಲಿ ಎಂದು ಶುಭ ಹಾರೈಸಿದ್ದಾರೆ.

ಇತ್ತ ಗರ್ಭಿಣಿ ಕರೀನಾ ಕಪೂರ್​ , ನಟ ಅಯುಷ್ಮಾನ್​ ಖುರಾನಾ, ನಟಿ ಸೋನಂ ಕಪೂರ್​ ಸೇರಿದಂತೆ ಅನೇಕರು ಇನ್ಸ್​ಟಾಗ್ರಾಂನಲ್ಲಿ ನಟಿ ದಿಯಾ ಮಿರ್ಜಾಗೆ ಶುಭಾಶಯ ಕೋರಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...