alex Certify ಇನ್ಸ್​ಟಾ ಪೋಸ್ಟ್ ಮೂಲಕ ಟ್ರೋಲಿಗರ ಬಾಯಿ ಮುಚ್ಚಿಸಿದ ಕರಣ್​ ವೀರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇನ್ಸ್​ಟಾ ಪೋಸ್ಟ್ ಮೂಲಕ ಟ್ರೋಲಿಗರ ಬಾಯಿ ಮುಚ್ಚಿಸಿದ ಕರಣ್​ ವೀರ್

ಹಿಂದಿ ಧಾರವಾಹಿ ನಟ ಕರಣ್​ವೀರ್​ ಬೋಹ್ರಾ ಮತ್ತವರ ಪತ್ನಿ ತೀಜಯ್​ ಸಿಧು ಕೆಲ ದಿನಗಳ ಹಿಂದಷ್ಟೇ ಮತ್ತೊಂದು ಹೆಣ್ಣು ಮಗುವಿನ ಪೋಷಕರಾಗಿದ್ದಾರೆ. ಈ ದಂಪತಿಗೆ ಈಗಾಗಲೇ ಇಬ್ಬರು ಅವಳಿ ಹೆಣ್ಣು ಮಕ್ಕಳಿದ್ದಾರೆ.

ಇಬ್ಬರು ಹೆಣ್ಣು ಮಕ್ಕಳಿದ್ದಂತೆಯೇ ಕರಣ್​ ವೀರ್​ ಬೋಹ್ರಾ ದಂಪತಿ ಗಂಡು ಮಗುವಿನ ಆಸೆ ಪಟ್ಟಿದ್ದರು ಅಂತಾ ಅನೇಕರು ಟ್ರೋಲ್​ ಮಾಡಿದ್ದರು. ಆದರೆ ಈ ಟ್ರೋಲ್​​ಗೆ ಇನ್ಸ್ಟಾಗ್ರಾಂ ಪೋಸ್ಟ್ ಮೂಲಕ ಕರಣ್​ ಖಡಕ್​ ಉತ್ತರ ನೀಡಿದ್ದಾರೆ.

ತಮ್ಮ ಇಬ್ಬರು ಅವಳಿ ಮಕ್ಕಳೊಂದಿಗಿನ ಫೋಟೋ ಶೇರ್​ ಮಾಡಿರುವ ಫೇಮಸ್​ ನಟ ಕರಣ್​ ವೀರ್​ ಬೋಹ್ರಾ, ಅನೇಕರು ನಾವು ಗಂಡು ಮಗುವಿಗಾಗಿ ಆಸೆ ಪಟ್ಟಿದ್ದೇವು ಅಂತಾ ಅಭಿಪ್ರಾಯಪಟ್ಟಿದ್ದಾರೆ. ಆದರೆ ನಾವು ಗಂಡು ಮಗುಗಾಗಲಿ ಇಲ್ಲವೇ ಮತ್ತೊಂದು ಹೆಣ್ಣು ಮಗು ಬೇಕೆಂದು ಪ್ಲಾನ್​ ಮಾಡಿರಲಿಲ್ಲ. ನಾವು ಕೇವಲ ಆರೋಗ್ಯವಂತ ಮಗು ಹುಟ್ಟಲಿ ಅಂತಾ ಪ್ರಾರ್ಥಿಸಿದ್ದೆವು ಅಂತಾ ಬರೆದುಕೊಂಡಿದ್ದಾರೆ.

ನಾನೆಂದಿಗೂ ಲಿಂಗ ತಾರತಮ್ಯ ಭಾವನೆ ಹೊಂದಿದ ವ್ಯಕ್ತಿಯಲ್ಲ. ಒಂದು ವೇಳೆ ನಮಗೆ ಗಂಡು ಮಗು ಜನಿಸಿದ್ದರೂ ಅದಕ್ಕೂ ನಾವು ಇಷ್ಟೇ ಪ್ರೀತಿಯನ್ನ ನೀಡುತ್ತಿದ್ವಿ. ನನ್ನ ಮೂವರೂ ಹೆಣ್ಣುಮಕ್ಕಳನ್ನೂ ನಾನು ಸಮನಾಗಿ ಪ್ರೀತಿ ಮಾಡುತ್ತೇನೆ ಎಂದು ಬರೆದುಕೊಳ್ಳುವ ಮೂಲಕ ಟ್ರೋಲಿಗರ ಬಾಯಿ ಮುಚ್ಚಿಸಿದ್ದಾರೆ.

View this post on Instagram

A post shared by Karanvir Bohra (@karanvirbohra)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...