alex Certify ‘ಸರಳವಾಗಿ ಬದುಕುವ ವಿಶ್ವದ ಶಕ್ತಿಶಾಲಿ ಮನುಷ್ಯ’ ಎಂದು ಪ್ರಧಾನಿ ಮೋದಿಯನ್ನು ಬಣ್ಣಿಸಿದ ಕಂಗನಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಸರಳವಾಗಿ ಬದುಕುವ ವಿಶ್ವದ ಶಕ್ತಿಶಾಲಿ ಮನುಷ್ಯ’ ಎಂದು ಪ್ರಧಾನಿ ಮೋದಿಯನ್ನು ಬಣ್ಣಿಸಿದ ಕಂಗನಾ

ಬಾಲಿವುಡ್ ನಟಿ ಕಂಗನಾ ರಣಾವತ್ ಸದಾ ಸುದ್ದಿಯಲ್ಲಿರುತ್ತಾರೆ. ಈ ಮೊದಲು ಹೃತಿಕ್ ರೋಷನ್ ಜೊತೆ ಕದನಕ್ಕೆ ಬಿದ್ದಿದ್ದ ಕಂಗನಾ ಈ ವಿಚಾರವಾಗಿ ನ್ಯಾಯಾಲಯದ ಮೆಟ್ಟಿಲನ್ನೂ ಏರಿದ್ದರು. ಆ ಬಳಿಕವೂ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಕಂಗನಾ ಬಾಲಿವುಡ್ ಚಿತ್ರರಂಗದ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದರು.

ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಸಂದರ್ಭದಲ್ಲಿ ಕಂಗನಾ ನೀಡಿದ್ದ ಕೆಲ ಹೇಳಿಕೆಗಳು ಬಾಲಿವುಡ್ ಚಿತ್ರರಂಗದ ಹುಳುಕುಗಳನ್ನು ಬಯಲು ಮಾಡಿದ್ದು ಸುಳ್ಳಲ್ಲ. ತಮಗನಿಸಿದ್ದನ್ನು ನೇರವಾಗಿ ಹೇಳುವ ಕಂಗನಾ ರಣಾವತ್ ಈ ಕಾರಣಕ್ಕಾಗಿಯೇ ಬಹಳಷ್ಟು ಮಂದಿಯ ಮೆಚ್ಚುಗೆಗೂ ಪಾತ್ರರಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವೈಖರಿ ಕುರಿತಂತೆ ಹಲವು ಸಂದರ್ಭಗಳಲ್ಲಿ ಶ್ಲಾಘನೆ ವ್ಯಕ್ತಪಡಿಸಿರುವ ಕಂಗನಾ ರಣಾವತ್ ಈಗ ಮತ್ತೊಮ್ಮೆ ಮೋದಿಯವರ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಸರಳವಾಗಿ ಬದುಕುವ ವಿಶ್ವದ ಶಕ್ತಿಶಾಲಿ ಮನುಷ್ಯ ಎಂದು ನರೇಂದ್ರ ಮೋದಿಯವರನ್ನು ಕಂಗನಾ ಬಣ್ಣಿಸಿದ್ದಾರೆ.

Kangana Ranaut is all reward for PM Narendra Modi, calls him 'strongest man  on this planet' - Sahiwal

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...