alex Certify ಮುದ್ದು ಸಹೋದರಿಯ ಜನ್ಮದಿನದ ಸಂಭ್ರಮದಲ್ಲಿ ಕಂಗನಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುದ್ದು ಸಹೋದರಿಯ ಜನ್ಮದಿನದ ಸಂಭ್ರಮದಲ್ಲಿ ಕಂಗನಾ

ಬಾಲಿವುಡ್​ ನಟಿ ಕಂಗನಾ ರಣಾವತ್​ ತಮ್ಮ ಸಹೋದರಿ ರಂಗೋಲಿ ಚಾಂಡೇಲ್​ರ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ರಂಗೋಲಿಯ ಹುಟ್ಟುಹಬ್ಬದ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕಂಗನಾ ಜನ್ಮ ದಿನ ಆಚರಿಸಲು ಸಾಧ್ಯವಾಗುವಂತೆ ಮಾಡಿದ ನಿರ್ದೇಶಕ ವಿಜಯ್​ಗೆ ಧನ್ಯವಾದ ಅರ್ಪಿಸಿದ್ದಾರೆ.

ಸಹೋದರಿ ಜನ್ಮದಿನದ ಫೋಟೋಗಳನ್ನ ಶೇರ್​ ಮಾಡುತ್ತಾ ನಿರ್ದೇಶಕ ವಿಜಯ್​ ಸರ್ ನನಗೆ ಶೂಟಿಂಗ್​ನಿಂದ ವಿರಾಮ ನೀಡಿದ್ರು. ಹೀಗಾಗಿ ನನಗೆ ಜನ್ಮದಿನ ಆಚರಿಸೋಕೆ ಸಾಧ್ಯವಾಯ್ತು ಅಂತಾ ಬರೆದುಕೊಂಡಿದ್ದಾರೆ.

ಫೋಟೋದಲ್ಲಿ ಕಂಗನಾ ರಣಾವತ್​ ನೀಲಿ ಬಣ್ಣದ ಪೊಲ್ಕಾ ಡಾಟ್​​ ಜಂಪ್​ ಸೂಟ್​ ಧರಿಸಿದ್ದಾರೆ. ರಂಗೋಲಿ ತಲೆಗೆ ಕಿರೀಟ ಧರಿಸಿ ಕೇಕ್​ ಕಟ್​ ಮಾಡ್ತಿರೋದನ್ನ ನೋಡಬಹುದಾಗಿದೆ. ನೆಚ್ಚಿನ ಸಹೋದರಿಯ ಬರ್ತಡೇಗೆ ಉಡುಗೊರೆ ರೂಪದಲ್ಲಿ ಮುದ್ದಾದ ನಾಯಿಮರಿಯನ್ನ ಕಂಗನಾ ನೀಡಿದ್ದಾರೆ.

— Kangana Ranaut (@KanganaTeam) December 3, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...