alex Certify ಭಾರತೀಯ ಸಂಸ್ಕೃತಿ ಬಗ್ಗೆ ಉಪದೇಶ ನೀಡಲು ಹೋಗಿ ಪೇಚಿಗೆ ಸಿಲುಕಿದ ಕಂಗನಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತೀಯ ಸಂಸ್ಕೃತಿ ಬಗ್ಗೆ ಉಪದೇಶ ನೀಡಲು ಹೋಗಿ ಪೇಚಿಗೆ ಸಿಲುಕಿದ ಕಂಗನಾ…!

ಬಾಲಿವುಡ್ ನಟಿ ಕಂಗನಾ ರಣಾವತ್​ ಟ್ವಿಟರ್​​ನಲ್ಲಿ ಒಂದಿಲ್ಲೊಂದು ವಿಚಾರಗಳ ಬಗ್ಗೆ ಅಭಿಪ್ರಾಯ ಹೊರಹಾಕುತ್ತಲೇ ಇರ್ತಾರೆ. ಈ ಬಾರಿಯು ಕೂಡ ಭಾರತೀಯ ಸಂಸ್ಕೃತಿ ಬಗ್ಗೆ ಪಾಠ ಮಾಡಲು ಹೋಗಿ ಪೇಚಿಗೆ ಸಿಲುಕಿದ್ದಾರೆ.

ಬುಧವಾರ ಬೆಳಗ್ಗೆ ಕೂಡ ಟ್ವೀಟ್​ ಮಾಡಿದ್ದ ಕಂಗನಾ ರಣಾವತ್​ ಇದರಲ್ಲಿ ಮೂವರು ಪುರಾತನ ಕಾಲದ ಮಹಿಳೆಯರನ್ನ ಹೊಗಳಿದ್ದರು. ಈ ಫೋಟೋದಲ್ಲಿದ್ದ ಮೂವರು ಭಾರತ, ಜಪಾನ್​ ಹಾಗೂ ಸೈರಿಯಾದ ಪರವಾನಗಿ ಪಡೆದಿದ್ದ ವೈದ್ಯೆಯರಾಗಿದ್ದಾರೆ.

ಈಗೇನಾದರೂ ನೀವು ಇಂತಹ ಸಾಧನೆ ಮಾಡಿದವರ ಫೋಟೋ ಕ್ಲಿಕ್ಕಿಸಲು ಹೋದರೆ ಅವರು ಅಮೆರಿಕದ ಹರಿದ ಜೀನ್ಸ್ ಹಾಗೂ ಎನ್​ ರಾಗ್ಸ್​ನಂತಹ ಬ್ಲೌಸ್​ ತೊಟ್ಟು ಫೋಸ್​ ಕೊಡುವ ಮೂಲಕ ಅಮೆರಿಕದ ವಸ್ತುಗಳಿಗೆ ಪ್ರಾಯೋಜಕತ್ವ ಕೊಡ್ತಾರೆ ಎಂದು ಬರೆದುಕೊಂಡಿದ್ದಾರೆ.

ನಟಿ ಕಂಗನಾ ರಣಾವತ್​ ಈ ರೀತಿ ಪಾಶ್ಚಿಮಾತ್ಯ ಉಡುಪುಗಳ ಬಳಕೆ ಬಗ್ಗೆ ಅಭಿಪ್ರಾಯ ಹೊರಹಾಕಿದ ಕೆಲವೇ ಗಂಟೆಗಳಲ್ಲಿ ಟ್ವೀಟಿಗರು ಅಲರ್ಟ್ ಆಗಿದ್ದಾರೆ. ಕಂಗನಾ ಧರಿಸಿದ ಅಮೆರಿಕನ್​ ಜೀನ್ಸ್ ಹಾಗೂ ಪಾಶ್ಚಿಮಾತ್ಯ ಧಿರಿಸುಗಳ ಫೋಟೋ ಶೇರ್​ ಮಾಡಿದ ನೆಟ್ಟಿಗರು ಉಳಿದವರಿಗೆ ಹೇಳುವ ನೀನು ಈ ರೀತಿ ಉಡುಪು ಧರಿಸೋದು ಸರೀನಾ ಎಂದು ಪ್ರಶ್ನೆ ಮಾಡ್ತಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...