alex Certify ಒಡಹುಟ್ಟಿದವರಿಗೆ ದುಬಾರಿ ಗಿಫ್ಟ್‌ ನೀಡಿದ ಕಂಗನಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಡಹುಟ್ಟಿದವರಿಗೆ ದುಬಾರಿ ಗಿಫ್ಟ್‌ ನೀಡಿದ ಕಂಗನಾ

ಬಾಲಿವುಡ್​ ನಟಿ ಕಂಗನಾ ರಣಾವತ್​​ ತನ್ನ ಸಹೋದರ ಹಾಗೂ ಸಹೋದರಿಗಾಗಿ ಐಷಾರಾಮಿ ಅಪಾರ್ಟ್​ಮೆಂಟ್​ ಒಂದನ್ನ ಖರೀದಿ ಮಾಡಿದ್ದಾರೆ. ವರದಿಗಳ ಪ್ರಕಾರ ಕಂಗನಾ ರಣಾವತ್​ ತನ್ನ ಸಹೋದರಿ ರಂಗೋಲಿ ಚಾಂಡೇಲ್​ ಹಾಗೂ ಸಹೋದರ ಅಕ್ಷತ್​ಗಾಗಿ 4 ಕೋಟಿ ರೂಪಾಯಿ ಮೌಲ್ಯದ ಅಪಾರ್ಟ್ಮೆಂಟ್​ ಖರೀದಿಸಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಟ್ವೀಟ್​ ಮಾಡಿರುವ ಕಂಗನಾ, ನಾನು ಈ ಮೂಲಕ ನಮ್ಮ ಸಂಪತ್ತನ್ನ ಕುಟುಂಬಸ್ಥರಿಗೆ ಹಂಚಬೇಕು ಎಂಬ ಸಂದೇಶವನ್ನ ಸಾರುತ್ತಿದ್ದೇನೆ. ನೆನಪಿಡಿ. ಸಂತೋಷವನ್ನ ಹಂಚಿಕೊಂಡಲ್ಲಿ ಮಾತ್ರ ಅದು ದ್ವಿಗುಣಗೊಳ್ಳಲಿದೆ. ಸುಂದರವಾದ ಅಪಾರ್ಟ್​ಮೆಂಟ್​ ನಿರ್ಮಾಣ ಹಂತದಲ್ಲಿದೆ. ಹಾಗೂ 2023ರ ವೇಳೆಗೆ ಈ ಅಪಾರ್ಟ್​ಮೆಂಟ್​ ರೆಡಿಯಾಗಲಿದೆ ಎಂದು ಹೇಳಿದ್ದಾರೆ. ನನ್ನ ಕುಟುಂಬಕ್ಕೆ ಇಷ್ಟು ಮಾಡುತ್ತಿರುವ ನಾನೇ ಭಾಗ್ಯವಂತೆ ಎಂದು ಬರೆದುಕೊಂಡಿದ್ದಾರೆ.

ಕಂಗನಾ ಮೊದಲಿನಿಂದಲೂ ತನ್ನ ಸಹೋದರ ಹಾಗೂ ಸಹೋದರಿಗೆ ಎಲ್ಲಾ ವಿಚಾರಗಳಲ್ಲೂ ಬೆಂಬಲ ನೀಡುತ್ತಲೇ ಬಂದಿದ್ದಾರೆ. ಈ ಬಾರಿ ಚಂಡೀಗಢದಲ್ಲಿರುವ ಐಷಾರಾಮಿ ಫ್ಲ್ಯಾಟ್​ಗಳನ್ನ ಉಡುಗೊರೆಯಾಗಿ ನೀಡಿದ್ದಾರೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...