alex Certify ವಾರಾಂತ್ಯ ಗಳಿಕೆಯಲ್ಲೂ ಶಾರುಖ್ ಖಾನ್ ‘ಜವಾನ್’ ಹೊಸ ದಾಖಲೆ: ಮೊದಲ ವಾರಾಂತ್ಯದಲ್ಲೇ 520 ಕೋಟಿ ರೂ. ಕಲೆಕ್ಷನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾರಾಂತ್ಯ ಗಳಿಕೆಯಲ್ಲೂ ಶಾರುಖ್ ಖಾನ್ ‘ಜವಾನ್’ ಹೊಸ ದಾಖಲೆ: ಮೊದಲ ವಾರಾಂತ್ಯದಲ್ಲೇ 520 ಕೋಟಿ ರೂ. ಕಲೆಕ್ಷನ್

ನವದೆಹಲಿ: ಶಾರುಖ್ ಖಾನ್ ಅಭಿನಯದ ‘ಜವಾನ್’ ಬಾಕ್ಸ್ ಆಫೀಸ್ ದಾಖಲೆಗಳನ್ನೆಲ್ಲಾ ಧೂಳಿಪಟ ಮಾಡಿದೆ. ದಿನದಿಂದ ದಿನಕ್ಕೆ ಚಿತ್ರ ಯಶಸ್ಸಿನ ದಾಖಲೆ ಸೃಷ್ಟಿಸುತ್ತಿದೆ. ಚಿತ್ರವು ನಿರಂತರವಾಗಿ ಭಾರಿ ಕಲೆಕ್ಷನ್ ಮಾಡುತ್ತಿದ್ದು, ಮೊದಲ ವಾರಾಂತ್ಯದಲ್ಲಿಯೇ 500 ಕೋಟಿ ರೂ. ಗಡಿ ದಾಟಿದೆ. ಈ ಚಿತ್ರವು ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 520.79 ಕೋಟಿ ಒಟ್ಟು ಕಲೆಕ್ಷನ್ ಮಾಡಿದೆ.

‘ಜವಾನ್’ 4ನೇ ದಿನದಂದು ಬಾಕ್ಸ್ ಆಫೀಸ್‌ ನಲ್ಲಿ ಹಿಂದಿಯಲ್ಲಿ 71.63 ಕೋಟಿ ಮತ್ತು ಇತರೆ ಭಾಷೆಗಳಲ್ಲಿ 8.47 ಕೋಟಿ ರೂ. ಸೇರಿ 80.10 ಕೋಟಿ ಗಳಿಸಿದೆ. ಚಿತ್ರವು ವಾರಾಂತ್ಯದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿ ಚಿತ್ರರಂಗಕ್ಕೆ ಹೊಸ ಮಾನದಂಡಗಳನ್ನು ಸೃಷ್ಟಿಸುವ ಹಾದಿಯಲ್ಲಿದೆ.

‘ಜವಾನ್’ ರೆಡ್ ಚಿಲ್ಲಿಸ್ ಎಂಟರ್‌ಟೈನ್‌ಮೆಂಟ್ ಪ್ರಸ್ತುತಿಯಾಗಿದ್ದು, ಅಟ್ಲೀ ನಿರ್ದೇಶಿಸಿದ್ದಾರೆ, ಗೌರಿ ಖಾನ್ ನಿರ್ಮಿಸಿದ್ದಾರೆ ಮತ್ತು ಗೌರವ್ ವರ್ಮಾ ಸಹ-ನಿರ್ಮಾಣ ಮಾಡಿದ್ದಾರೆ. ಚಲನಚಿತ್ರವು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಸೆಪ್ಟೆಂಬರ್ 7, 2023 ರಂದು ವಿಶ್ವಾದ್ಯಂತ ಬಿಡುಗಡೆಯಾಯಿತು. ಬಿಡುಗಡೆಯಾದ ದಿನದಿಂದಲೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...