alex Certify ಐಷಾರಾಮಿ ಆಸ್ತಿ ಖರೀದಿ ಮಾಡಿದ ನಟಿ ಜಾನ್ವಿ ಕಪೂರ್​​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಷಾರಾಮಿ ಆಸ್ತಿ ಖರೀದಿ ಮಾಡಿದ ನಟಿ ಜಾನ್ವಿ ಕಪೂರ್​​..!

ಬಾಲಿವುಡ್​ ನಟಿ ಜಾನ್ವಿ ಕಪೂರ್​​ ಮುಂಬೈನ ದುಬಾರಿ ಏರಿಯಾದಲ್ಲಿ 39 ಕೋಟಿ ರೂಪಾಯಿ ಮೌಲ್ಯದ ಮನೆಯನ್ನ ಖರೀದಿ ಮಾಡಿದ್ದಾರೆ. ಇದು ಮುಂಬೈನ ಅತ್ಯಂತ ಐಷಾರಾಮಿ ಹಾಗೂ ದುಬಾರಿ ವಸತಿ ಪ್ರದೇಶದಲ್ಲಿ ಒಂದಾಗಿದೆ.

ನಟಿ ಜಾನ್ವಿ ಡಿಸೆಂಬರ್​ 10ರಂದು ಆಸ್ತಿಯನ್ನ ನೋಂದಾವಣಿ ಮಾಡಿದ್ದರು. 4144 ಚದರ ಅಡಿ ವಿಸ್ತೀರ್ಣದಲ್ಲಿ ಫ್ಲಾಟ್​ನ 14,15 ಹಾಗೂ 16ನೇ ಮಹಡಿಗಳನ್ನ ಖರೀದಿಸಿದ್ದಾರೆ. ಅಂದಹಾಗೆ ಜಾನ್ವಿ ಕಪೂರ್​ಗೆ ಅಮಿತಾಬ್​ ಬಚ್ಚನ್​, ಅಜಯ್​ ದೇವಗನ್​, ಏಕ್ತಾ ಕಪೂರ್​ ಸೇರಿದಂತೆ ಅನೇಕ ಸ್ಟಾರ್​ ನಟರು ಇನ್ಮೇಲೆ ನೆರೆ ಹೊರೆಯವರಾಗಿ ಇರಲಿದ್ದಾರೆ.

ಸೂಪರ್​ ಹಿಟ್​ ಮರಾಠಿ ಚಿತ್ರ ಸೈರಾಟ್​ ಸಿನಿಮಾದ ಹಿಂದಿ ರಿಮೇಕ್​​ ದಢಕ್​ ಮೂಲಕ 2018ರಲ್ಲಿ ನಟಿ ಜಾನ್ವಿ ಕಪೂರ್​ ಬಾಲಿವುಡ್​ಗೆ ಪಾದಾರ್ಪಣೆ ಮಾಡಿದ್ದರು. ಇತ್ತೀಚಿಗೆ ಅವರ ಅಭಿನಯದ ಗುಂಜನ್​ ಸಕ್ಸೇನಾ : ದಿ ಕಾರ್ಗಿಲ್​ ಗರ್ಲ್​ ಒಟಿಟಿ ವೇದಿಕೆಯಲ್ಲಿ ಸದ್ದು ಮಾಡಿತ್ತು. ಜಾನ್ವಿ ದೋಸ್ತಾನಾ 2 ಸಿನಿಮಾದ ಮೂಲಕ ಶೀಘ್ರದಲ್ಲೇ ಕಾರ್ತಿಕ್​ ಆರ್ಯನ್​ ಜೊತೆ ತೆರೆ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...