alex Certify ಬಾಲಿವುಡ್ ಈ ಜೋಡಿ ಮಧ್ಯೆ ಕಾಣಿಸಿಕೊಂಡಿದೆ ಬಿರುಕು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಿವುಡ್ ಈ ಜೋಡಿ ಮಧ್ಯೆ ಕಾಣಿಸಿಕೊಂಡಿದೆ ಬಿರುಕು…!

ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಸದ್ಯ ಸುದ್ದಿಯಲ್ಲಿದ್ದಾರೆ. ಈ ಹಿಂದೆ ಕಾರ್ತಿಕ್ ಆರ್ಯನ್ ಹಾಗೂ ನಟಿ ಸಾರಾ ಅಲಿ ಖಾನ್  ಮಧ್ಯೆ ಸಂಬಂಧವಿದೆ ಎಂಬ ಸುದ್ದಿಯಿತ್ತು. ಈ ವರ್ಷ ಆರ್ಯನ್ ಹೆಸರು ಜಾಹ್ನವಿ ಕಪೂರ್ ಜೊತೆ ಥಳಕು ಹಾಕಿಕೊಂಡಿತ್ತು. ಜಾಹ್ನವಿ ಹಾಗೂ ಕಾರ್ತಿಕ್ ಒಟ್ಟಿಗೆ ಗೋವಾಕ್ಕೆ ತೆರಳಿದ್ದರು. ಅವರಿಬ್ಬರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೊಂದು ರೊಮ್ಯಾಂಟಿಕ್ ಟ್ರಿಪ್ ಆಗಿತ್ತು.

ಇಬ್ಬರ ಮಧ್ಯೆ ಪ್ರೀತಿ ಚಿಗುರಿತ್ತು ಎಂಬ ಸುದ್ದಿಯಿತ್ತು. ಆದ್ರೆ ಅದು ಎಷ್ಟು ಸತ್ಯ ಎಂಬುದು ಗೊತ್ತಿಲ್ಲ. ಸದ್ಯ ಇನ್ಸ್ಟ್ರಾಗ್ರಾಮ್ ನಲ್ಲಿ ಇಬ್ಬರು ಅನ್ಫಾಲೋ ಮಾಡಿದ್ದಾರೆ. ಇಬ್ಬರು ಈ ನಿರ್ಧಾರ ಕೈಗೊಳ್ಳಲು ಕಾರಣವೇನು ಎಂಬುದು ಗೊತ್ತಾಗಿಲ್ಲ. ಇಬ್ಬರ ಮಧ್ಯೆ ಜಗಳ ನಡೆದಿದೆಯಾ ಅಥವಾ ಇಬ್ಬರು ಬೇರೆ ದಾರಿಯಲ್ಲಿ ನಡೆಯುವ ನಿರ್ಧಾರ ಕೈಗೊಂಡಿದ್ದಾರ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

BIG NEWS: ಟಾಲಿವುಡ್ ಹೊಸ ನೀತಿ ವಿರುದ್ಧ ಸಿಡಿದೆದ್ದ ರಾಬರ್ಟ್ – ಕನ್ನಡ ಸಿನಿಮಾಗಳಿಗೆ ಅಲ್ಲಿ ಸಮಸ್ಯೆ ಮಾಡುತ್ತಿರುವುದೇಕೆ ಎಂದ ದರ್ಶನ್

ಸಾಮಾಜಿಕ ಜಾಲತಾಣದಲ್ಲೂ ಈ ಬಗ್ಗೆ ಚರ್ಚೆಯಾಗ್ತಿದೆ. ಜಾಹ್ನವಿ ಕಪೂರ್, ಕಾರ್ತಿಕ್ ಆರ್ಯನ್ ಇನ್ಸ್ಟ್ರಾಗ್ರಾಮ್ ಬ್ಲಾಕ್ ಮಾಡಿದ್ದಾರೆ ಎನ್ನಲಾಗ್ತಿದೆ. ಇನ್ನು ಕೆಲವರು ಇದು ಸುಳ್ಳು ಸುದ್ದಿ ಎನ್ನುತ್ತಿದ್ದಾರೆ. ಕಾರ್ತಿಕ್ ಆರ್ಯನ್ ಹಾಗೂ ಜಾಹ್ನವಿ ಲಾಕ್ ಡೌನ್ ಮೊದಲೇ ದೋಸ್ತಾನಾ-2 ಚಿತ್ರದ ಶೂಟಿಂಗ್ ಶುರು ಮಾಡಿದ್ದರು. ಆದ್ರೆ ಲಾಕ್ ಡೌನ್ ನಿಂದಾಗಿ ಶೂಟಿಂಗ್ ನಿಂತಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...