alex Certify BIG BREAKING: ಡೇಟಿಂಗ್ ನಲ್ಲಿ ಮಾಜಿ ವಿಶ್ವಸುಂದರಿ ಸುಷ್ಮಿತಾ ಸೇನ್ –ಖಾಸಗಿ ಫೋಟೋ ಹಂಚಿಕೊಂಡ ಲಲಿತ್ ಮೋದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಡೇಟಿಂಗ್ ನಲ್ಲಿ ಮಾಜಿ ವಿಶ್ವಸುಂದರಿ ಸುಷ್ಮಿತಾ ಸೇನ್ –ಖಾಸಗಿ ಫೋಟೋ ಹಂಚಿಕೊಂಡ ಲಲಿತ್ ಮೋದಿ

ನವದೆಹಲಿ: ಮಾಜಿ ವಿಶ್ವಸುಂದರಿ, ಖ್ಯಾತ ನಟಿ ಸುಷ್ಮಿತಾ ಸೇನ್ ಅವರನ್ನು ಐಪಿಎಲ್ ಸಂಸ್ಥಾಪಕ ಹಾಗೂ ಉದ್ಯಮಿ ಲಲಿತ್ ಕುಮಾರ್ ಮೋದಿ ಮದುವೆಯಾಗಿದ್ದಾರೆ ಎಂದು ಹೇಳಲಾಗಿದೆ.

ಸುಶ್ಮಿತಾ ಸೇನ್ ಅವರೊಂದಿಗಿರುವ ಫೋಟೋಗಳನ್ನು ಲಲಿತ್ ಮೋದಿ ಹಂಚಿಕೊಂಡಿದ್ದು, ಅವರು ಮದುವೆಯಾಗಿದ್ದಾರೆ ಎನ್ನಲಾಗಿದೆ.

ಭಾರತೀಯ ಉದ್ಯಮಿ ಮತ್ತು ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ ಗುರುವಾರ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಜೊತೆಗಿರುವ ಫೋಟೋ ಪೋಸ್ಟ್ ಮಾಡಿ ಕುಟುಂಬದೊಂದಿಗೆ ಜಾಗತಿಕ ಪ್ರವಾಸದ ಕೈಗೊಂಡಿದ್ದೇವೆ. ಮಾಲ್ಡೀವ್ಸ್, ಸಾರ್ಡಿನಿಯಾ ನಂತರ ಲಂಡನ್‌ ಗೆ ಹಿಂತಿರುಗಿದ್ದೇವೆ. ಹೊಸ ಜೀವನಕ್ಕೆ ಹೊಸ ಆರಂಭ ಎಂದು ಬರೆದುಕೊಂಡಿದ್ದಾರೆ.

ಲಲಿತ್ ಮೋದಿ ಸಾಮಾಜಿಕ ಮಾಧ್ಯಮದಲ್ಲಿ ಆಶ್ಚರ್ಯಕರ ಸಂಗತಿಯನ್ನು ಪ್ರಕಟಿಸಿದ್ದು, ಇದಕ್ಕೆ ಅಚ್ಚರಿ ವ್ಯಕ್ತವಾಗುವ ಜೊತೆಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

ಆದರೆ, ಸುಶ್ಮಿತಾ ಸೇನ್, ನಾನು ಡೇಟಿಂಗ್ ನಲ್ಲಿ ಇದ್ದೇವೆ. ಮದುವೆಯಾಗಿಲ್ಲ. ಮುಂದೆ ಒಂದು ದಿನ ಮದುವೆಯಾಗುತ್ತೇವೆ ಎಂದು ಲಲಿತ್ ಮೋದಿ ತಮ್ಮ ಮದುವೆಯ ಕುರಿತಂತೆ ನಂತರದಲ್ಲಿ ಸ್ಪಷ್ಟನೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...