alex Certify ನಟ ಸೋನು ಸೂದ್‌ ಗೆ ನ್ಯಾಯಾಲಯದಲ್ಲಿ ಭಾರಿ ಹಿನ್ನಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟ ಸೋನು ಸೂದ್‌ ಗೆ ನ್ಯಾಯಾಲಯದಲ್ಲಿ ಭಾರಿ ಹಿನ್ನಡೆ

ಮುಂಬೈನ ಉಪನಗರ ಜುಹುನಲ್ಲಿ ಬಾಲಿವುಡ್​ ನಟ ಸೋನು ಸೂದ್​ ನಿರ್ಮಿಸಿದ್ದ ವಸತಿ ಕಟ್ಟಡವನ್ನ ಅಕ್ರಮ ನಿರ್ಮಾಣ ಎಂದು ಆರೋಪಿಸಿ ಬಿಎಂಸಿ ನೀಡಿದ್ದ ನೋಟಿಸ್​ ಪ್ರಶ್ನಿಸಿ ಮೇಲ್ಮನವಿ ಹಾಗೂ ಮಧ್ಯಂತರ ಅರ್ಜಿ ಸಲ್ಲಿಸಿದ್ದ ಸೋನು ಸೂದ್​​ಗೆ ಮುಂಬೈ ಹೈಕೋರ್ಟ್​ನಲ್ಲಿ ಹಿನ್ನಡೆ ಉಂಟಾಗಿದೆ.

ಬಾಲಿವುಡ್​ ನಟ ಸೋನು ಸೂದ್​ ಅರ್ಜಿಯನ್ನ ವಜಾಗೊಳಿಸಿದ ನ್ಯಾಯಮೂರ್ತಿ ಪ್ರಥ್ವಿರಾಜ್​ ಚವ್ಹಾಣ್​​ ನ್ಯಾಯದ ಪರ ಕಾನೂನು ಇರುತ್ತದೆ ಎಂದು ಹೇಳಿದ್ದಾರೆ.

ಸೋನು ಸೂದ್​ ಪರ ವಕೀಲ ಅಮೋಘ್​​ ಸಿಂಗ್​​ ಬಿಎಂಸಿ ನೀಡಿರುವ ನೋಟಿಸ್​ಗೆ ಉತ್ತರ ನೀಡಲು 10 ವಾರಗಳ ಕಾಲಾವಕಾಶ ಬೇಕು. ಅಲ್ಲಿಯವರೆಗೆ ಕಟ್ಟಡವನ್ನ ಧ್ವಂಸ ಮಾಡದಂತೆ ಬಿಎಂಸಿಗೆ ನಿರ್ದೇಶನ ನೀಡುವಂತೆ ನ್ಯಾಯಾಯಲಕ್ಕೆ ಕೋರಿದ್ದರು.

ಸೋನು ಸೂದ್​ ಮನವಿಯನ್ನ ನಿರಾಕರಿಸಿದ ಕೋರ್ಟ್​ ಸೂದ್​ಗೆ ಈ ಹಿಂದೆ ಸಾಕಷ್ಟು ಅವಕಾಶಗಳು ಇದ್ದವು ಎಂದು ಹೇಳಿದೆ. ನೀವು ಬಹಳ ತಡವಾಗಿ ಇಲ್ಲಿಗೆ ಬಂದಿದ್ದೀರಾ. ನೀವು ಈ ವಿಚಾರವಾಗಿ ಬಿಎಂಸಿ ಕಚೇರಿಯನ್ನೇ ಭೇಟಿಯಾಗಿ ಎಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...