alex Certify ’ಸೂಪರ್‌ 30’ ಬಿಡುಗಡೆಯಾಗಿ 2 ವರ್ಷ: ಹಳೆ ವಿಡಿಯೋ ಹಂಚಿಕೊಂಡ ಹೃತಿಕ್‌ ರೋಷನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

’ಸೂಪರ್‌ 30’ ಬಿಡುಗಡೆಯಾಗಿ 2 ವರ್ಷ: ಹಳೆ ವಿಡಿಯೋ ಹಂಚಿಕೊಂಡ ಹೃತಿಕ್‌ ರೋಷನ್

ಬಾಲಿವುಡ್‌ನ ಖ್ಯಾತ ನಟ ಹೃತಿಕ್ ರೋಷನ್ ಅಭಿನಯದ ’ಸೂಪರ್‌ 30’ ಚಿತ್ರದ ಬಿಡುಗಡೆಯಾಗಿ ಎರಡು ವರ್ಷ ಕಳೆದ ಸಂದರ್ಭದಲ್ಲಿ ಈ ವಿಶೇಷ ಘಳಿಗೆಯನ್ನು ಆಚರಿಸಲು ಮುಂದಾದ ಹೃತಿಕ್, ಚಿತ್ರದ ಚಿತ್ರೀಕರಣದ ಸೆಟ್‌ನಲ್ಲಿ ನಡೆದ ಫನ್ನಿ ಘಟನೆಯೊಂದರ ದೃಶ್ಯಗಳನ್ನು ಶೇರ್‌ ಮಾಡಿಕೊಂಡಿದ್ದಾರೆ.

ಬಿಟಿಎಸ್‌ ವಿಡಿಯೋದಲ್ಲಿ ಹೃತಿಕ್ ಅವರು 2003ರಲ್ಲಿ ರಿಲೀಸ್ ಆದ ತಮ್ಮದೇ ಚಿತ್ರ ’ಕೋಯಿ ಮಿಲ್ ಗಯಾ’ದ ’ಜಾದೂ ಜಾದೂ’ ಹಾಡು ಗುನುಗುತ್ತಿರುವುದನ್ನು ನೋಡಬಹುದಾಗಿದೆ. ಇಷ್ಟೇ ಆಗಿದ್ದರೆ ಇದರಲ್ಲೇನೂ ವಿಶೇಷ ಇರುತ್ತಿರಲಿಲ್ಲ.

ಹೃತಿಕ್ ಈ ಹಾಡಿಗೆ ಬಿಹಾರಿ ಹಿಂದಿಯಲ್ಲಿ ದನಿ ಕೊಟ್ಟಿದ್ದಾರೆ. ತಮ್ಮ ವ್ಯಾನಿಟಿ ವ್ಯಾನ್‌ನ ಸದಸ್ಯರನ್ನು ಹೃತಿಕ್‌ ಹಾಡಿನ ಮೂಲಕ ರಂಜಿಸುತ್ತಿರುವುದನ್ನು ವಿಡಿಯೋದುದ್ದಕ್ಕೂ ನೋಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...