alex Certify ಹೃತಿಕ್ ರೋಷನ್​​ ಅಭಿಮಾನಿ ಮಗುವನ್ನ ಕಂಡ ನೆಟ್ಟಿಗರಿಗೆ ಅಚ್ಚರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೃತಿಕ್ ರೋಷನ್​​ ಅಭಿಮಾನಿ ಮಗುವನ್ನ ಕಂಡ ನೆಟ್ಟಿಗರಿಗೆ ಅಚ್ಚರಿ…!

ಬಾಲಿವುಡ್​ ನಟ ಹೃತಿಕ್​ ರೋಷನ್​ರ ಅಭಿಮಾನಿಯಾದ ಹೃಷಿಕೇಶ್​ ಆಂಘೊಮ್​​ ತಮ್ಮ ಕಂದಮ್ಮನಿಗೆ ಹೃತಿಕ್​ ಎಂದು ಹೆಸರಿಟ್ಟಿದ್ದು ಮಾತ್ರವಲ್ಲದೇ ನೆಟ್ಟಿಗರು ಆಶ್ಚರ್ಯ ಪಡುವಂತಹ ವಿಚಾರವೊಂದನ್ನ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ.

ನವೆಂಬರ್​ 23ರಂದು ಹೃಷಿಕೇಶ್​ ಆಂಗೋಮ್​ ಗಂಡು ಮಗುವಿಗೆ ತಂದೆಯಾಗಿದ್ದರು. ಹೃತಿಕ್​ ರೋಷನ್​ರ ದೊಡ್ಡ ಅಭಿಮಾನಿಯಾಗಿದ್ದ ಹೃಷಿಕೇಶ್​ ಮಗುವಿಗೆ ಹೃತಿಕ್​ ಎಂದೇ ನಾಮಕರಣ ಮಾಡಿದ್ದರು.

ಇದೀಗ ಮಗುವಿನ ಕೈ ಫೋಟೋವನ್ನ ಟ್ವಿಟರ್​ನಲ್ಲಿ ಶೇರ್​ ಮಾಡಿರುವ ಹೃಷಿಕೇಶ್​ ನನ್ನ ಮಗನೂ ಕೂಡ ಹೃತಿಕ್​ರಂತೆ ಆರು ಬೆರಳನ್ನ ಹೊಂದಿದ್ದಾನೆ ಎಂಬ ವಿಚಾರವನ್ನ ಬಹಿರಂಗಪಡಿಸಿದ್ದಾರೆ.

‘ಕಹೋ ನಾ ಪ್ಯಾರ್​ ಹೈ’ ಸಿನಿಮಾ ನೋಡಿದ ಬಳಿಕ ನಾನು ಹೃತಿಕ್​ ರೋಷನ್​ರ ಅಭಿಮಾನಿಯಾಗಿದ್ದೆ. ಹೀಗಾಗಿ ರಿಷಿಕೇಶ್​ ಆಗಿದ್ದ ನನ್ನ ಹೆಸರನ್ನ ಹೃಷಿಕೇಶ್​ ಎಂದು ಬದಲಾಯಿಸಿಕೊಂಡೆ. ಇದೀಗ ನನ್ನ ಮಗ ಜನಿಸಿದ್ದು ಆತನಿಗೆ ಹೃತಿಕ್​ ಎಂದು ಹಸರಿಡಲಿದ್ದೇನೆ. ಅಲ್ಲದೇ ನನ್ನ ಮಗ ಹೃತಿಕ್​​ರಂತಹ ಹಸ್ತ ಹೊಂದಿರೋದನ್ನ ಕಂಡು ನಾನು ಸಖತ್​ ಖುಷಿಯಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

— Hrishikesh Angom (@hr_angomba) November 23, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...