alex Certify ಪ್ರಸಿದ್ಧ ಜೋಡಿ ವಿಚ್ಛೇದನಕ್ಕೆ ಕಾರಣವಾಯ್ತು ಲಾಕ್ ಡೌನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಸಿದ್ಧ ಜೋಡಿ ವಿಚ್ಛೇದನಕ್ಕೆ ಕಾರಣವಾಯ್ತು ಲಾಕ್ ಡೌನ್

ಕೊರೊನಾ, ಲಾಕ್ ಡೌನ್ ಅನೇಕರ ಜೀವನ ಬದಲಿಸಿದೆ. ಇದಕ್ಕೆ ಸೆಲೆಬ್ರಿಟಿಗಳು ಹೊರತಾಗಿಲ್ಲ. ಈಗ ಅಮೆರಿಕಾದ ಪ್ರಸಿದ್ಧ ಸೆಲೆಬ್ರಿಟಿ ಕಿಮ್ ಕರ್ದಾಶಿಯನ್ ಜೀವನದ ಮೇಲೂ ಇದು ಪರಿಣಾಮ ಬೀರಿದೆ. ಕಿಮ್ ಪತಿ ಕಾನ್ಯೆ ವೆಸ್ಟ್ ರಿಂದ ದೂರವಾಗ್ತಿದ್ದಾಳೆ.

ಇಬ್ಬರ ಮಧ್ಯೆ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿ ಅನೇಕ ದಿನಗಳಿಂದ ಹರಿದಾಡುತ್ತಿತ್ತು. ಈಗ ಮತ್ತೆ ಇಬ್ಬರೂ ಚರ್ಚೆಗೆ ಬಂದಿದ್ದಾರೆ. ಕಿಮ್, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಳೆಂಬ ಸುದ್ದಿ ಹರಡಿದೆ.

ಇಬ್ಬರು 2014ರಲ್ಲಿ ಮದುವೆಯಾಗಿದ್ದರು. ಕೆಲ ತಿಂಗಳಿಂದ ಇಬ್ಬರು ಬೇರೆ ಮನೆಯಲ್ಲಿ ವಾಸವಾಗಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಇಬ್ಬರ ಮಧ್ಯೆ ಗಲಾಟೆ ನಡೆದಿತ್ತಂತೆ. ಇದ್ರಿಂದ ಕಿಮ್ ಅಸಮಾಧಾನಗೊಂಡಿದ್ದಳಂತೆ. ಲಾಕ್ ಡೌನ್ ಸಂದರ್ಭದಲ್ಲಿ ಮನೆಯಲ್ಲಿದ್ದರೂ ಕಾನ್ಯೆ ಮನೆ ಕೆಲಸ ಮಾಡ್ತಿರಲಿಲ್ಲವಂತೆ. ಮಕ್ಕಳ ಜೊತೆ ಸಮಯ ಕಳೆಯುತ್ತಿರಲಿಲ್ಲವಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...