alex Certify ಕಣ್ಣಂಚು ತೇವವಾಗಿಸಿದೆ ಸುಶಾಂತ್ ಸಿಂಗ್ ರಜಪೂತ್ ಕೊನೆ ಸಿನಿಮಾದ ಟ್ರೈಲರ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣಂಚು ತೇವವಾಗಿಸಿದೆ ಸುಶಾಂತ್ ಸಿಂಗ್ ರಜಪೂತ್ ಕೊನೆ ಸಿನಿಮಾದ ಟ್ರೈಲರ್…!

ಮುಂಬೈ: ಬಾಲಿವುಡ್ ಉದಯೋನ್ಮುಖ ನಟ ಸುಶಾಂತ್ ಸಿಂಗ್ ರಜಪೂತ್ ಇನ್ನೂ ಜಯದ ಮೆಟ್ಟಿಲನ್ನು ಹತ್ತುತ್ತಿರುವಾಗಲೇ ಇಹಲೋಕ ತ್ಯಜಿಸಿರುವ ಸಂಗತಿ ಎಲ್ಲರಿಗೂ ಗೊತ್ತಿದೆ. ಆದರೆ, ಅವರು ತಮ್ಮ ಕೊನೇ ಗಿಫ್ಟ್ ಎಂಬಂತೆ ಬಿಟ್ಟುಹೋದ ಸಿನಿಮಾವೊಂದು ಕೋವಿಡ್-19 ಕಾರಣದಿಂದ ಬಿಡುಗಡೆಯಾಗಿರಲಿಲ್ಲ. ಈಗ ಆ ಸಿನಿಮಾದ ಟ್ರೈಲರ್ ಸದ್ದು ಮಾಡುತ್ತಿದೆ. ನೆಟ್ಟಿಗರ ಕಣ್ಣನ್ನು ತೇವಗೊಳಿಸಿದೆ.

ಹೌದು, ಸುಶಾಂತ್ ಆತ್ಮಹತ್ಯೆಗೆ ಮುನ್ನ “ದಿಲ್ ಬೇಚಾರಾ” ಸಿನಿಮಾವನ್ನು ಪೂರ್ಣಗೊಳಿಸಿದ್ದರು. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಅದು ತೆರೆಕಂಡಿರಲಿಲ್ಲ. ಇದೀಗ ಆ ಸಿನಿಮಾದ ಟ್ರೈಲರ್ ಅನ್ನು ಬಿಡುಗಡೆ ಮಾಡಿದ್ದು, ಸಿಕ್ಕಾಪಟ್ಟೆ ವೀಕ್ಷಣೆ ಪಡೆಯುತ್ತಿದೆ. ಜಾನ್ ಗ್ರೀನ್ ಅವರ ಖ್ಯಾತ ಪುಸ್ತಕ “ದಿ ಫಾಲ್ಟ್ ಇನ್ ಅವರ್ ಸ್ಟಾರ್” ಪುಸ್ತಕದ ಕಥಾ ಹಂದರವನ್ನು ಈ ಸಿನಿಮಾ ಹೊಂದಿದೆ.

ಸದ್ಯ ಕೋವಿಡ್ ಹಿನ್ನೆಲೆಯಲ್ಲಿ ಚಿತ್ರಮಂದಿರಗಳನ್ನು ತೆರೆಯಲು ಸಾಧ್ಯವಿಲ್ಲದ ಕಾರಣ, ಇದೇ ಜುಲೈ 24ರಂದು ನಿಮ್ಮ ಮನೆಯ ಟಿವಿ ಹಾಗೂ ಕಂಪ್ಯೂಟರ್ ಪರದೆಗಳ ಮೇಲೆ ವೀಕ್ಷಿಸಬಹುದಾಗಿದೆ. ಚಿತ್ರದ ನಾಯಕಿ ಸಂಜನಾ ಸಂಘಿ ಚಿತ್ರದ ಟ್ರೈಲರ್ ಅನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಅಲ್ಲದೆ, ಈ ಚಿತ್ರದ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಸಹ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...