alex Certify ರಾಕ್​ ಮ್ಯೂಸಿಕ್ ಮೇಲೆ ಒಲವು ಹೊಂದಿದ್ದ ತಾಯಿಯಿಂದ ಮಕ್ಕಳಿಗೆ ವಿಚಿತ್ರ ಹೆಸರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಕ್​ ಮ್ಯೂಸಿಕ್ ಮೇಲೆ ಒಲವು ಹೊಂದಿದ್ದ ತಾಯಿಯಿಂದ ಮಕ್ಕಳಿಗೆ ವಿಚಿತ್ರ ಹೆಸರು

ರಾಕ್​ ಮ್ಯೂಸಿಕ್​​​ ಬಗ್ಗೆ ಅತಿಯಾದ ಒಲವನ್ನ ಹೊಂದಿದ್ದ ನ್ಯೂಜಿಲೆಂಡ್​​​ನ ಮಹಿಳೆಯೊಬ್ಬರು ತಮ್ಮ ಮೂವರು ಮಕ್ಕಳಿಗೆ ಪ್ರತಿಷ್ಟಿತ ರಾಕ್​ ಮ್ಯೂಸಿಕ್​ ಬಾಂಡ್​​ಗಳ ಹೆಸರನ್ನೇ ಇಟ್ಟಿದ್ದಾರೆ.

ರಾಕ್​ ಮ್ಯೂಸಿಕ್​ ಅಪ್ಪಟ ಅಭಿಮಾನಿಯಾದ ಈಕೆ ತನ್ನ ಮೂವರು ಮಕ್ಕಳಿಗೆ ಮೆಟಲಿಕಾ, ಸ್ಲೇಯರ್​ ಹಾಗೂ ಪ್ಯಾಂಟೆರಾ ಎಂದು ನಾಮಕರಣ ಮಾಡಿದ್ದಾಳೆ. ಈ ಮೂರು ಹೆಸರುಗಳು ಪ್ರತಿಷ್ಟಿತ ಹೆವಿ ಮೆಟಲ್​ ಬ್ಯಾಂಡ್​ ಆಗಿವೆ.

ಪತ್ರಕರ್ತ ಹಾಗೂ ನಿರ್ಮಾಪಕ ಡೇವಿಡ್​ ಫೆರಿಯರ್​ ಈ ಅಚ್ಚರಿಯ ಸ್ಟೋರಿಯೊಂದನ್ನ ಬೆಳಕಿಗೆ ತಂದಿದ್ದಾರೆ. ಮೊದಲು ಈ ಬಗ್ಗೆ ಅನುಮಾನ ಹೊಂದಿದ್ದ ಡೇವಿಡ್​​ ನ್ಯೂಜಿಲೆಂಡ್​ ರಿಜಿಸ್ಟರ್​ ಜನರಲ್​​ನಲ್ಲಿ ಹೆಸರು ಪರಿಶೀಲನೆ ಮಾಡಿದ ವೇಳೆ ಇದು ಸತ್ಯ ಸುದ್ದಿ ಅನ್ನೋದು ಕನ್ಫರ್ಮ್ ಆಗಿದೆ.

ಈ ಬಗ್ಗೆ ಫೆರಿಯರ್​ಗೆ ಸ್ಪಷ್ಟನೆ ನೀಡಿರುವ ರಿಜಿಸ್ಟರ್​ ಜನರಲ್​ ಹಾಗೂ ಜನರಲ್​ ಮ್ಯಾನೇಜರ್​ ಜೆಫ್​ ಮೊಂಟೆಗೋಮೆರಿ ಈ ರೀತಿ ಬ್ಯಾಂಡ್​ಗಳ ಹೆಸರನ್ನ ಮಕ್ಕಳಿಗೆ ಇಡೋದ್ರಲ್ಲಿ ಯಾವುದೇ ತಪ್ಪಿಲ್ಲ. ಅದು ಅಪರಾಧವಂತೂ ಅಲ್ಲವೇ ಅಲ್ಲ ಎಂದು ಹೇಳಿದ್ದಾರೆ.

ಫೆರಿಯರ್​ ಮೂವರು ಮಕ್ಕಳ ಜನನ ಪ್ರಮಾಣ ಪತ್ರವನ್ನೂ ಪರಿಶೀಲನೆ ಮಾಡಿದ್ದಾರೆ. ಹಾಗೂ ಮೆಟಲಿಕಾ, ಸ್ಲೇಯರ್​ ಮತ್ತು ಪಂಟೆರಾರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದಾರೆ.

— David Farrier (@davidfarrier) July 7, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...