ಇತ್ತೀಚಿನ ದಿನಗಳಲ್ಲಿ ವಿಶ್ವ ತಾಯಂದಿರ ದಿನ ಸಾಕಷ್ಟು ಪ್ರವರ್ಧಮಾನಕ್ಕೆ ಬಂದಿದೆ. ಈ ನಿರ್ದಿಷ್ಟ ದಿನದಂದು ಮಕ್ಕಳು ತಮ್ಮ ತಾಯಂದಿರನ್ನು ವಿಶೇಷ ರೀತಿಯಲ್ಲಿ ನೆನಪಿಸಿಕೊಳ್ಳುತ್ತಾರೆ. ಆದರೆ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ತಮ್ಮ ಗೆಳತಿಗೆ ಅಚ್ಚರಿ ರೀತಿಯಲ್ಲಿ ಹಾರೈಸಿದ್ದಾರೆ.
ಅರ್ಜುನ್ ರಾಂಪಾಲ್ ತನ್ನ ಗೆಳತಿ ಗೇಬ್ರಿಯಲ್ ಡೆಮೆಟ್ರಿಯಡ್ಸ್ ಗೆ ಇನ್ ಸ್ಟಾ ದಲ್ಲಿ ಅಮ್ಮಂದಿರ ದಿನದ ಹಾರೈಕೆ ಪೋಸ್ಟ್ ಮಾಡಿದ್ದಾರೆ. 2019ರಲ್ಲಿ ಅರ್ಜುನ್ ಮತ್ತು ಗೆಬ್ರಿಯಲ್ ಗೆ ಮಗುವಾಗಿತ್ತು.
ಮೊದಲು ತಾಯಿಯ ಫೋಟೋವನ್ನು ಪೋಸ್ಟ್ ಮಾಡಿದ್ದ ಅರ್ಜುನ್ ರಾಂಪಾಲ್, ನಂತರ ಮುಂದಿನ ಪಾಳಿ ಎಂಬಂತೆ ಗೆಳತಿಯೊಂದಿಗೆ ತಾವಿರುವ ಫೋಟೋವನ್ನು ಪೋಸ್ಟ್ ಮಾಡಿ ವಿಶ್ವ ತಾಯಂದಿರ ಶುಭಾಶಯ ಕೋರಿದ್ದಾರೆ.
ಹೊಸದಾಗಿ ತಾಯಿಯಾದ ಪತ್ನಿಯನ್ನು ಕುರಿತಾಗಿ, ಈಕೆ ಹೊಸ ಅಮ್ಮ, ತುಂಬ ಒಳ್ಳೆಯವಳು. ಮೊದಲ ತಾಯಂದಿರ ದಿನದ ಶುಭಾಶಯಗಳು. ಮಮ್ಮಾ. ಲವ್ ಯೂ ಎಂದು ಶೀರ್ಷಿಕೆ ನೀಡಿದ್ದಾರೆ.
ರಾಂಪಾಲ್ ಗೆ ಇದು ಎರಡನೇ ಮದುವೆ. ಮೊದಲ ಪತ್ನಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. 2018ರಲ್ಲಿ ಅವರು ಮೊದಲ ಪತ್ನಿಯಿಂದ ವಿಚ್ಛೇದನ ಪಡೆದಿದ್ದರು.