alex Certify ಕಂಗನಾ ಮನೆಗೆ ಪೊಲೀಸ್ ಭದ್ರತೆ‌, ಕಾರಣ ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಂಗನಾ ಮನೆಗೆ ಪೊಲೀಸ್ ಭದ್ರತೆ‌, ಕಾರಣ ಗೊತ್ತಾ…?

ಕಂಗನಾ ರನಾವತ್ ಇತ್ತೀಚಿನ ದಿನಗಳಲ್ಲಿ ಸಿನಿಮಾ ಹೊರತಾಗಿ ಸುದ್ದಿಯಾಗುತ್ತಿದ್ದಾರೆ. ಸುಶಾಂತ್ ಆತ್ಮಹತ್ಯೆ ಆದ ನಂತರದಲ್ಲಿ ಬಾಲಿವುಡ್ ನಲ್ಲಿ‌ ಅನೇಕ ಮಂದಿ‌ ಮೇಲೆ ನೇರ ಆರೋಪ ಮಾಡಿದ್ದಾರೆ ಈ ನಟಿ. ಇವರ ಆರೋಪಕ್ಕೆ ಸಾಕಷ್ಟು ಮಂದಿ‌ ವಿರೋಧವನ್ನು ವ್ಯಕ್ತಪಡಿಸಿದ್ದರು. ಇದೀಗ ಅವರ ಮನೆ ಬಳಿ ಗುಂಡಿನ ಶಬ್ದ ಕೇಳಿ‌ ಬಂದಿದೆ.

ಹೌದು, ಶುಕ್ರವಾರ ರಾತ್ರಿ ವೇಳೆಯಲ್ಲಿ ಕಂಗನಾ ಮನೆ ಬಳಿ ಗುಂಡಿನ ಶಬ್ದ ಕೇಳಿ ಬಂದಿದೆ. ಪಟಾಕಿ ಇರಬಹುದು ಎಂದುಕೊಂಡ ಕಂಗನಾಗೆ ಮತ್ತೊಮ್ಮೆ ಗುಂಡಿನ ಶಬ್ದ ಕೇಳಿದೆ. ತಕ್ಷಣ ಸೆಕ್ಯುರಿಟಿ ವಿಚಾರಿಸಿದಾಗ ಏನು ಎಂಬುದು ಗೊತ್ತಾಗಿಲ್ಲ. ಇನ್ನು ಅಲ್ಲಿನ ಸೇಬು ತೋಟದವರೇನಾದರೂ ಬಾವಲಿ ಓಡಿಸಲು ಹೀಗೆ ಮಾಡಿದ್ದಾರಾ ಎಂಬುದನ್ನ ಪರಿಶೀಲನೆ ಮಾಡಿದ್ದಾರೆ. ಆದರೆ ಅವರು ಕೂಡ ಗುಂಡು ಹಾರಿಸಿಲ್ಲ ಎಂದು ಹೇಳಿದ್ದಾರೆ.

ಹೀಗಾಗಿ ಪೊಲೀಸರಿಗೆ ಕಂಗನಾ ಘಟನೆ ಬಗ್ಗೆ ಹೇಳಿದ್ದಾರೆ. ನಾನು ಅನೇಕ ಬಾರಿ ಎಷ್ಟೋ ವಿಚಾರಗಳನ್ನು ಬಹಿರಂಗವಾಗಿ ಹೇಳಿದ್ದೆ. ಹಾಗಾಗಿ ನನ್ನನ್ನು ಹೆದರಿಸಲು ಹೀಗೆ ಮಾಡಿರಬಹುದು ಎಂದು ಪೊಲೀಸರ ಮುಂದೆ ಹೇಳಿದ್ದಾರೆ ಕಂಗನಾ. ಇನ್ನು ಈ ಸಂಬಂಧ ಪೊಲೀಸರು‌ ಕಾರ್ಯಪ್ರವೃತ್ತರಾಗಿದ್ದಾರೆ. ಅಲ್ಲದೆ ಮುನ್ನೆಚ್ಚರಿಕಾ ಕ್ರಮವಾಗಿ ನಟಿ‌ ಮನೆ ಮುಂದೆ ಪೊಲೀಸ್ ಭದ್ರತೆ ಒದಗಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...