alex Certify ಮತ್ತೆ ಮುನ್ನೆಲೆಗೆ ಬಂತು ಬಿಗ್‌ ಬಿ ನಟನೆಯ ʼಕಭಿ ಖುಷಿ ಕಭೀ ಗಮ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೆ ಮುನ್ನೆಲೆಗೆ ಬಂತು ಬಿಗ್‌ ಬಿ ನಟನೆಯ ʼಕಭಿ ಖುಷಿ ಕಭೀ ಗಮ್ʼ

ಅಂತರ್ಜಾಲ ಎಂದರೆ ಅದೊಂದು ಮೋಜಿನ ತಾಣ. ಯಾವುದೇ‌ ವಿಷಯವನ್ನು ಕೆಲವೇ ಕ್ಷಣಗಳಲ್ಲಿ ಜಗತ್ತಿನಾದ್ಯಂತ ಪಸರಿಸಿಬಿಡುವ ತಾಕತ್ತು ಜಾಲತಾಣಗಳಿಗಿದೆ.

ಹಾಗೆ ಯಾವುದೇ ವಿಷಯವನ್ನು ಕ್ಷಣದಲ್ಲಿ ಮನೆ ಮಾತು ಮಾಡಿಬಿಡುವ ಕ್ರಿಯಾಶೀಲತೆಯ ಪ್ರಶಂಸೆಯನ್ನು ಜಾಲತಾಣ ಪ್ರಿಯರಿಗೆ ನೀಡಬೇಕು. ಅವರ ಹಾಸ್ಯ ಪ್ರಜ್ಞೆಗೆ ಎಂಥವರೂ ಮೆಚ್ಚಲೇ ಬೇಕು.‌

ಮಿಮ್ ಗಳು ಈಗಿನ ಟ್ರೆಂಡ್. ಹಲವು ಬಾಲಿವುಡ್ ಸಿನೆಮಾದ ಡೈಲಾಗ್ ಗಳು ಮಿಮ್ ಗಳಾಗಿ ಪ್ರಸಿದ್ಧವಾಗಿವೆ. ಹೇರಾ ಫೇರಿ, ಸಿಂಗಂ, ಜಾನಿ ದುಷ್ಮನ್ ಮುಂತಾದ‌ ಪ್ರಸಿದ್ಧ ಸಿನೆಮಾಗಳ ಸನ್ನಿವೇಶಗಳನ್ನು ಮಿಮ್ ಗಳಾಗಿ ಮಾಡಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಪ್ರಸಿದ್ಧವಾಗಿವೆ.‌ ಆ ಸಾಲಿಗೆ ಈಗ ಮತ್ತೊಂದು ಸೇರಿಕೊಂಡಿದೆ.‌

2001 ರಲ್ಲಿ ತೆರೆ‌ ಕಂಡ ಕರಣ್ ಜೋಹರ್ ಅವರ, ಅಮಿತಾಭ್ ಬಚ್ಚನ್, ಜಯಾ ಬಚ್ಚನ್, ಶಾರುಖ್ ಖಾನ್, ಹೃತಿಕ್ ರೋಶನ್, ಕಾಜೋಲ್ ಹಾಗೂ ಕರೀನಾ ಕಪೂರ್ ಅಭಿನಯದ “ಕಭಿ ಖುಷಿ ಕಭಿ ಗಮ್” ಚಿತ್ರದ ಡೈಲಾಗ್ ಈಗ ಮಿಮ್‌ ಆಗಿ ಪ್ರಸಿದ್ಧವಾಗಿದೆ. ಖಾಸಗಿ ಜೆಟ್ ವಿಮಾನದಲ್ಲಿ ಅಮಿತಾಭ್ ಬಚ್ಚನ್ ಹಾಗೂ ಜಯಾ ಬಚ್ಚನ್ ಲಂಡನ್ ಗೆ ತೆರಳುತ್ತಾರೆ.

ವಿಮಾನ ಇಳಿಯುವ ಸಂದರ್ಭದಲ್ಲಿ ಅಮಿತಾಭ್ ತಮ್ಮ ಹಿಂದೆ ಇರುವ ಜಯಾ ಅವರ ಬಳಿ “ಗೆಸ್ ಕರೊ ಹಮ್ ಕಹಾ ಹೆ” ( ನಾವು ಎಲ್ಲಿದ್ದೇವೆ ಎಂದು ಊಹಿಸು) ಎಂದು ಹೇಳುವ ಸನ್ನಿವೇಶವನ್ನು ಮಿಮ್‌ ಆಗಿ ರಚಿಸಲಾಗಿದೆ.‌ ಅದಕ್ಕೆ ನೆಟ್ಟಿಗರು ಸಾಕಷ್ಟು ಪ್ರತಿಕ್ರಿಯೆ ನೀಡಿದ್ದಾರೆ. ಈಗ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಎಲ್ಲರೂ ಚಿಕ್ಕಂದಿನಲ್ಲಿದ್ದಾಗ ಬಿಡುಗಡೆಯಾದ ಚಿತ್ರ ಅದಾಗಿದ್ದರಿಂದ ಸನ್ನಿವೇಶಗಳು ಎಲ್ಲರಿಗೂ ಪರಿಚಿತವಾಗಿದ್ದು ಮಿಮ್ ಗಳು ಮತ್ತಷ್ಟು ಪ್ರಸಿದ್ಧವಾಗಲು ಕಾರಣವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...