alex Certify ಕೊರೊನಾ ಕಾಲದಲ್ಲಿ ಹೀಗೊಂದು ರೂಫ್ ‌ಟಾಪ್ ಆರ್ಕೆಸ್ಟ್ರಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಕಾಲದಲ್ಲಿ ಹೀಗೊಂದು ರೂಫ್ ‌ಟಾಪ್ ಆರ್ಕೆಸ್ಟ್ರಾ…!

ನಾವೆಲ್ ಕೊರೊನಾ ವೈರಸ್ ಕೊಡುತ್ತಿರುವ ಕಾಟದಿಂದ ಜಗತ್ತಿನಾದ್ಯಂತ ಎಲ್ಲ ಕ್ಷೇತ್ರಗಳಲ್ಲೂ ಸಾಕಷ್ಟು ಮಾರ್ಪಾಡುಗಳಾಗುತ್ತಿವೆ. ಸಂಗೀತ ಕ್ಷೇತ್ರವೂ ಇದಕ್ಕೆ ಭಿನ್ನವಾಗಿಲ್ಲ.

ಜರ್ಮನಿಯ ದಿಯೆಸ್‌ದೆನ್ ಎಂಬ ಊರಿನ ಅಪಾರ್ಟ್‌ಮೆಂಟ್‌ ಒಂದರ ಮಹಡಿ ಮೇಲೆ ಆರ್ಕೆಸ್ಟ್ರಾ ಒಂದನ್ನು ಆಯೋಜಿಸಲಾಗಿತ್ತು. “The Sky above Prohlis” ಹೆಸರಿನ ಈ ಕಚೇರಿ ವೇಳೆ, ಜರ್ಮನಿ, ಸ್ವಿಟ್ಝರ್ಲೆಂಡ್ ಹಾಗೂ ಆಸ್ಟ್ರಿಯಾದ ಆಲ್ಪ್ಸ್‌ ಪ್ರದೇಶದಲ್ಲಿ ಖ್ಯಾತವಾಗಿರುವ ಹಾಡುಗಳನ್ನು ಹಾಡಲಾಯಿತು.

1984ರ ಒಲಿಂಪಿಕ್‌ ಕೂಟಕ್ಕೆಂದು ಕಾಂಪೋಸ್ ಮಾಡಲಾದ ಫ್ಯಾನ್‌ಫೇರ್‌ ಹಾಡುಗಳನ್ನೂ ಸಹ ಈ ಕಲಾವಿದರು ಇದೇ ವೇಳೆ ಹಾಡಿದ್ದಾರೆ. ಈ ಕಚೇರಿಯನ್ನು ಅಕ್ಕಪಕ್ಕದ ಕಟ್ಟಡಗಳಲ್ಲಿದ್ದ ವಾಸಿಗಳು ತಂತಮ್ಮ ಮನೆಗಳ ಕಿಟಕಿಗಳಿಂದ ವೀಕ್ಷಿಸಿ ಖುಷಿ ಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...