alex Certify ಗರ್ಭಿಣಿಯಾಗಿರುವ ಮಾಹಿತಿ ಹಂಚಿಕೊಂಡ ʼಸ್ಲಮ್ ​ಡಾಗ್​ ಮಿಲಿಯೇನರ್ʼ​ ಖ್ಯಾತಿಯ ನಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಿಣಿಯಾಗಿರುವ ಮಾಹಿತಿ ಹಂಚಿಕೊಂಡ ʼಸ್ಲಮ್ ​ಡಾಗ್​ ಮಿಲಿಯೇನರ್ʼ​ ಖ್ಯಾತಿಯ ನಟಿ

ಸ್ಲಮ್​ಡಾಗ್​ ಮಿಲಿಯೇನರ್​ ಸಿನಿಮಾ ಖ್ಯಾತಿಯ ನಟಿ ಫ್ರೀಡಾ ಪಿಂಟೋ ತಾನು ಗರ್ಭಿಣಿಯಾಗಿದ್ದೇನೆ ಎಂಬ ವಿಚಾರವನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ನಿಶ್ಚಿತ ವರ ಕೋರಿ ಟ್ರಾನ್​​ರ ಜೊತೆಯಿರುವ ಫೋಟೋ ಶೇರ್​ ಮಾಡಿರುವ ನಟಿ ಬೇಬಿ ಟ್ರಾನ್​ ಬರುತ್ತಿದೆ ಎಂಬರ್ಥದಲ್ಲಿ ಶೀರ್ಷಿಕೆಯನ್ನ ನೀಡಿದ್ದಾರೆ. ಈ ಫೋಟೋದಲ್ಲಿ ಪಿಂಟೋರ ಬೇಬಿ ಬಂಪ್​ನ್ನೂ ನೀವು ಕಾಣಬಹುದಾಗಿದೆ.

ತಮ್ಮ ಬಹುಕಾಲದ ಗೆಳೆಯ ಅಡ್ವೆಂಚರ್​​ ಫೋಟೋಗ್ರಾಫರ್ ಕೋರಿ ಟ್ರ್ಯಾನ್​ ಜೊತೆ ಪಿಂಟೋ 2019ರ ನವೆಂಬರ್​ ತಿಂಗಳಲ್ಲಿ ಎಂಗೇಜ್​ ಆಗಿದ್ದರು. ತಮ್ಮ ಪ್ರಿಯಕರನ ಹುಟ್ಟುಹಬ್ಬದ ದಿನದಂದೇ ನಿಶ್ಚಿತಾರ್ಥದ ಮಾಹಿತಿಯನ್ನ ಪಿಂಟೋ ಅಭಿಮಾನಿಗಳ ಎದುರು ಬಿಚ್ಚಿಟ್ಟಿದ್ದರು.

ಮೂಲತಃ ಮಂಗಳೂರಿನ ಕ್ರಿಶ್ಚಿಯನ್ ಕುಟುಂಬಕ್ಕೆ ಸೇರಿರುವ ಈ ನಟಿ ಹಾಲಿವುಡ್​​ನಲ್ಲಿ ತಮ್ಮ ಛಾಪನ್ನ ಮೂಡಿಸಿದ್ದಾರೆ. ಹಿಂದಿ ಸಿನಿಮಾ ಮಾತ್ರವಲ್ಲದೇ ಪಿಂಟೋ ಅಮೆರಿಕನ್​, ಬ್ರಿಟನ್​ ಸಿನಿಮಾಗಳಲ್ಲೂ ನಟಿಸಿದ್ದಾರೆ.

View this post on Instagram

A post shared by Freida Pinto (@freidapinto)

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...