alex Certify ಟಾಮ್​ & ಜೆರ್ರಿ ಕಾರ್ಟೂನ್​ಗೆ ವಿಶೇಷ ರೀತಿಯಲ್ಲಿ ಜೀವ ತುಂಬಿದ ಕಲಾವಿದ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಾಮ್​ & ಜೆರ್ರಿ ಕಾರ್ಟೂನ್​ಗೆ ವಿಶೇಷ ರೀತಿಯಲ್ಲಿ ಜೀವ ತುಂಬಿದ ಕಲಾವಿದ..!

ಟಾಮ್​ & ಜೆರ್ರಿ ಅಂದ್ರೆ ಇಷ್ಟ ಇಲ್ಲ ಅನ್ನೋ ವ್ಯಕ್ತಿ ಸಿಗೋದು ತುಂಬಾನೇ ಕಷ್ಟ. ತನ್ನದೇ ಆದ ಶೈಲಿಯಲ್ಲಿ ಕಾರ್ಟೂನ್​ ಸರಣಿಗಳ ಪ್ರಸಾರ ಮಾಡುವ ಮೂಲಕ ಟಾಮ್ & ಜೆರ್ರಿ ಇಂದಿಗೂ ಅಭಿಮಾನಿಗಳ ಮನಸ್ಸಲ್ಲಿ ಹೆಸರಾಗಿದೆ. ಇದೇ ರೀತಿ ಟಾಮ್​ & ಜೆರ್ರಿ ಕಾರ್ಟೂನ್​ನ್ನು ತುಂಬಾನೇ ಇಷ್ಟ ಪಡ್ತಿದ್ದ ಫ್ಲೋರಿಡಾದ ಕಲಾವಿದನೊಬ್ಬ ಟಾಮ್​ ಆಕೃತಿಯ ರಗ್​ನ್ನು ತಯಾರಿಸಿದ್ದು ಇದು ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದೆ.

ಟಾಮ್ ಮೆಟ್ಟಿಲಿನ ಆಕೃತಿಯಲ್ಲೇ ಮಲಗಿರುವ ದೃಶ್ಯವನ್ನ ಈ ಕಂಬಳಿ ನೆನಪಿಸಿದೆ. ಟಾಮ್​ & ಜೆರ್ರಿ ಕಾರ್ಟೂನ್​​ನಿಂದ ಸ್ಫೂರ್ತಿ ಪಡೆದು ನಾನು ಈ ಕಂಬಳಿಯನ್ನ ನಿರ್ಮಿಸಿದ್ದೇನೆ ಎಂದು ಪೋಸ್ಟ್​ಗೆ ಶೀರ್ಷಿಕೆ ನೀಡಿದ್ದಾರೆ ಕಲಾವಿದ ನೆಲ್ಲಾಫ್​.

ಇನ್ನೊಂದು ಪ್ರತ್ಯೇಕ ಪೋಸ್ಟ್​ನಲ್ಲಿ ನೆಲ್ಲಾಫ್​​ ಇದೇ ಟಾಮ್​ ಕಂಬಳಿಯ ಇನ್ನೊಂದು ಫೋಟೋವನ್ನ ಶೇರ್ ಮಾಡಿದ್ದಾರೆ. ನಾನು ಶೀಘ್ರದಲ್ಲೇ ಇನ್ನೂ ಅನೇಕ ಟಾಮ್​ ಕಂಬಳಿಯನ್ನ ತಯಾರಿಸಬೇಕು ಎಂದುಕೊಂಡಿದ್ದೇನೆ. ಇದಕ್ಕಾಗಿ ನೀವು ನನ್ನ ಫಾಲೋ ಮಾಡಿ ಎಂದು ಬರೆದುಕೊಂಡಿದ್ದಾರೆ.

ನೆಲ್ಲಾಫ್​ರ ಈ ಪೋಸ್ಟ್​ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಕಮೆಂಟ್​ ಹಾಗೂ ರಿಟ್ವೀಟ್​ ವಿಭಾಗದಲ್ಲಿ ನೆಲ್ಲಾಫ್​ರ ಕಾರ್ಯವನ್ನ ಎಲ್ಲರೂ ಹಾಡಿಹೊಗಳಿದ್ದಾರೆ.

ಟಾಮ್​ & ಜೆರ್ರಿ ಕಾರ್ಟೂನ್​ ಸರಣಿ ಅಮೆರಿಕದ ವಿಲಿಯಂ ಹನ್ನಾ ಹಾಗೂ ಜೋಸೆಫ್​ ಬಾರ್ಬೆರಾ 1940ರಲ್ಲಿ ಆರಂಭಿಸಿದ್ದರು. ಈ ಕಾರ್ಟೂನ್​ ಬೆಕ್ಕು ಹಾಗೂ ಇಲಿಯ ನಡುವಿನ ವಿಶೇಷ ಬಾಂಧವ್ಯದ ಮೇಲೆ ಆಧರಿಸಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...