alex Certify ಮನೆಯ ಬಾಲ್ಕನಿಯಿಂದಲೇ ಅಕ್ಕಪಕ್ಕದ ನಿವಾಸಿಗಳಿಗೆ ಸಂಗೀತದ ರಸದೌತಣ ಬಡಿಸಿದ ಖ್ಯಾತ ಗಾಯಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯ ಬಾಲ್ಕನಿಯಿಂದಲೇ ಅಕ್ಕಪಕ್ಕದ ನಿವಾಸಿಗಳಿಗೆ ಸಂಗೀತದ ರಸದೌತಣ ಬಡಿಸಿದ ಖ್ಯಾತ ಗಾಯಕಿ

ಲಾಕ್ ಡೌನ್ ವೇಳೆ ಜನರು ಮನೆಯಲ್ಲಿ ಉಳಿದಿರುವ ಕಾರಣ ಅವರನ್ನು ರಂಜಿಸಲು ವಿವಿಧ ರೀತಿಯ ಚಟುವಟಿಕೆಗಳು ವಿಶ್ವಾದ್ಯಂತ ನಡೆಯುವ ನಡೆದಿರುವುದನ್ನು ಗಮನಿಸಿರಬಹುದು. ಕೆಲವೆಡೆ ಪೊಲೀಸರು ಜನರನ್ನು ರಂಜಿಸಲು ಹಲವು ಕಾರ್ಯಕ್ರಮ ನಡೆಸಿದ್ದರು.

ಈಗ ಮುಂಬೈನಲ್ಲಿ ಗಾಯಕಿ ಫಲ್ಗುಣಿ ಪಾಠಕ್, ತಮ್ಮ ಮನೆಯ ಬಾಲ್ಕನಿಯಿಂದ ಸಂಗೀತ ಕಚೇರಿ ನಡೆಸಿಕೊಟ್ಟು ಸುದ್ದಿಯಾಗಿದ್ದಾರೆ.

ಆನಂದ್ ಚಿತ್ರದ ‘ಕಹಿನ್ ಡೋರ್ ಜಬ್ ದಿನ್ ಧಾಲ್‌….’ ಹಾಡನ್ನು ಹಾಡಿದ ಪಾಠಕ್ ನೆರೆಹೊರೆಯವರನ್ನು ರಂಜಿಸುವಲ್ಲಿ ಸಫಲರಾದರು. ಪಾಠಕ್ ಪ್ರಯತ್ನವನ್ನು ನೆರೆ ಮನೆಯವರು ವಿಡಿಯೋದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ನೆಟ್ಟಿಗರು ಸಹ ಪಾಠಕ್ ಅವರ ಈ ಪ್ರಯತ್ನವನ್ನು ಕೊಂಡಾಡಿದ್ದು, ನೂರಾರು ಮಂದಿ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...